ಬೆಂಗಳೂರು: ಕಾಂಗ್ರೆಸ್ʼನವರಿಗೆ ಆಪರೇಷನ್ ಸಿಂಧೂರದ ಅಪಪ್ರಚಾರ ಟಾಸ್ಕ್ ಕೊಟ್ಟಂಗೆ ಕಾಣ್ತಿದೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವ್ರು ಆಪರೇಷನ್ ಸಿಂಧೂರದ ಬಗ್ಗೆ ಅಪಸ್ವರದ ಮಾತಾಡ್ತಿದ್ದಾರೆ. ಯಾಕೆ ಕದನ ನಿಲ್ಲಿಸಿದ್ರಿ ಅಂತಿದ್ದಾರೆ.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಇನ್ನು ಕೆಲವರು ಕೇವಲ ನಾಲ್ಕು ವಿಮಾನ ಹಾರಿಸಿದ್ರು ಅಂದಿದ್ದಾರೆ. ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್, ಕೊತ್ತೂರು ಮಂಜುನಾಥ್ ಇವರಿಗೆಲ್ಲ ಆಪರೇಷನ್ ಸಿಂಧೂರದ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂಗೆ ಕಾಣ್ತಿದೆ ಎಂದರು.
ಜೊತೆಗೆ ಕಾಂಗ್ರೆಸ್‌ನವ್ರಲ್ಲೇ ದ್ವಂದ್ವ ಕಾಣ್ತಿದೆ. ಇಡೀ ದೇಶ ಯುದ್ಧ ಬೇಕು ಅನ್ನುವಾಗ ಸಿದ್ದರಾಮಯ್ಯ ಯುದ್ಧ ಬೇಡ ಅಂದ್ರು. ನಂತರ ಸಿದ್ದರಾಮಯ್ಯ ಹಣೆ ಮೇಲೆ ದೊಡ್ಡ ಕುಂಕುಮ ಹಾಕಿಕೊಂಡು ಸುದ್ದಿಗೋಷ್ಠಿ ಮಾಡಿ ಸೈನಿಕರನ್ನು ಶ್ಲಾಘಿಸಿದರು. ಇಡೀ ಕ್ರೆಡಿಟ್ ಸೈನ್ಯಕ್ಕೆ ಅಂದ ಸಿದ್ದರಾಮಯ್ಯ ಈಗ ಅಪಪ್ರಚಾರ ಯಾಕೆ ಮಾಡ್ತಿದ್ದಾರೆ. ನಿಮ್ಮ ಅಪಪ್ರಚಾರ ಸೈನ್ಯದ ಬಗ್ಗೆನೋ ಅಥವಾ ರಾಜಕೀಯ ನಾಯಕತ್ವಕ್ಕೋ ಎಂದು ಪ್ರಶ್ನಿಸಿದರು.