ನವದೆಹಲಿ/ಇಸ್ಲಾಮಾಬಾದ್: ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರುವ ಆಪರೇಷನ್ ಸಿಂಧೂರ ಭಾರತೀಯರ ಮೈ ಜುಮ್ಮೆನ್ನುವಂತೆ ಮಾಡಿದೆ. ಕೇವಲ 23 ನಿಮಿಷಗಳಲ್ಲೇ ಪಾಕಿಸ್ತಾನದ ರಕ್ತಪಿಪಾಸುಗಳ ‘ಉಗ್ರ’ ನೆಲೆ ನಾಮಾವಶೇಷವಾಗಿವೆ. ಇದರ ಜೊತೆಗೆ ಭಾರತ ನಡೆಸಿದ ಪ್ರತೀಕಾರದ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಮಂದಿ ಸೇರಿ 14 ಮಂದಿ ಹತ್ಯೆಯಾಗಿದ್ದಾರೆ.
ಪಾಕ್ನ ಬಹಾವಲ್ಪುರದಲ್ಲಿ ಉಗ್ರ ಸಂಘಟನೆಯ ಪ್ರಧಾನ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ಮಸೂದ್ ಕುಟುಂಬದ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಬಹಾವಲ್ಪುರದ ಸುಭಾನ್ ಅಲ್ಲಾ ಮಸೀದಿ ಮೇಲಿನ ದಾಳಿಯಲ್ಲಿ ಬಲಿಯಾದವರಲ್ಲಿ ಪೈಕಿ ಜೆಇಎಂ ಮುಖ್ಯಸ್ಥನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ಕುಟುಂಬದ 5 ಮಕ್ಕಳು ಸೇರಿದ್ದಾರೆ. ಇದರ ಜೊತೆಗೆ ಮಸೂದ್ನ ಆಪ್ತ ಸಹಚರ, ಆತನ ತಾಯಿ ಸೇರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಜರ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಉಗ್ರರು ಮಾತ್ರವಲ್ಲ ಅವರ ಕುಟುಂಬವನ್ನು ನಾಶ ಮಾಡಬೇಕು. ಆಗ ಉಗ್ರರ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ. ಅವರಿಗೂ ನೋವು ಏನು ಎನ್ನುವುದು ಗೊತ್ತಾಗಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಈ ಜನರ ಆಗ್ರಹದಂತೆ ಮಸೂದ್ ಕುಟುಂಬವನ್ನೇ ಭಾರತ ನಾಶ ಮಾಡಿದೆ.
ಅಜರ್ ಹಿನ್ನೆಲೆ ಏನು?
ನಿಷೇಧಿತ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಪುಲ್ವಾಮಾ ದಾಳಿಯ ರೂವಾರಿ ಆಗಿದ್ದಾನೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್ನಲ್ಲಿರುವ ಜೈಷ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ 2019ರ ಮೇ 1ರಂದು ವಿಶ್ವಸಂಸ್ಥೆ ಅಜರ್ನನ್ನ ಜಾಗತಿಕ ಉಗ್ರ ಎಂದು ಘೋಷಿಸಿತ್ತು.
ಭಾರತದಿಂದ ಬಿಡುಗೆಯಾಗಿದ್ದು ಯಾವಾಗ?
1994ರಲ್ಲಿ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಜರ್ನನ್ನ ಬಂಧಿಸಲಾಗಿತ್ತು. ಆದರೆ 1999 ಡಿಸೆಂಬರ್ನಲ್ಲಿ ಭಾರತದ ವಿಮಾನ IC814 ಅನ್ನು ಹೈಜಾಕ್ ಮಾಡಿದಾಗ ಅಜರ್ನ್ನು ಬಿಡುಗಡೆ ಮಾಡಬೇಕೆಂದು ಅಪಹರಣಕಾರರು ಬೇಡಿಕೆಯೊಡ್ಡಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡು ಅಪಹರಣಕಾರರ ಒತ್ತಾಯಕ್ಕೆ ಮಣಿದು ಸರ್ಕಾರ ಅಜರ್ನನ್ನ ಬಿಡುಗಡೆ ಮಾಡಿತ್ತು.