ದಳಪತಿ ವಿಜಯ್ ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯ ದಾಳ ಹಾಕೋದಿಕ್ಕೆ ಹೊರಟಿದ್ದಾರೆ. ಅದಕ್ಕಾಗಿ ಟಿವಿಕೆ- ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಪಕ್ಷ ಕಟ್ಟಿ ಜನ ಸಂಘಟಿಸುತ್ತಿರುವ ದಳಪತಿ ಅತ್ತ ಕೊನೆಯ ಸಿನಿಮಾ ಜನನಾಯಗನ್ನಲ್ಲಿಯೂ ಬ್ಯುಸಿಯಾಗಿದ್ದಾರೆ. ವಿಜಯ್ ಕಟ್ಟ ಕಡೆಯ ಚಿತ್ರ ಜನನಾಯಗನ್ ಶೂಟಿಂಗ್ ಸದ್ಯ ಕೊಡೈಕೆನಲ್ ನಲ್ಲಿ ನಡೆಯುತ್ತಿದೆ. ಬಹಳ ಅದ್ಧೂರಿಯಾಗಿ ಕೆವಿಎನ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಜನನಾಯಗನ್ನಲ್ಲಿ ವಿಜಯ್ ಸಿನಿಮಾ ಮೂಲಕ ತಮ್ಮ ಪಕ್ಷವನ್ನು ಪ್ರಚಾರ ಮಾಡಲಿದ್ದಾರಂತೆ. ಅದೇಗೆ ಅಂತೀರಾ? ಮಾಜಿ ಪೊಲೀಸ್ ಅಧಿಕಾರಿ ಸಂಜಯ್ ವರದರಾಜನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಜಯ್ ಪಕ್ಷಕ್ಕೆ ತಮ್ಮದೇ ತಮಿಳಗ ವೆಟ್ರಿ ಕಳಗಂ ಹೆಸರನ್ನು ಬಳಸಿಕೊಂಡಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಈಗ ಹಬ್ಬಿದೆ.
#JanaNayagan – #ThalapathyVijay character name is “Thalapathy Vettri Kondan” & he sports a stylish TVK Tattoo on his hand
He’ll be the commander of people in the film
A complete commercial emotional political entertainer loading by #HVinoth 🔥 🔥 🔥 pic.twitter.com/JINMAIjBHC
— Movies Singapore (@MoviesSingapore) May 6, 2025
ಜನನಾಯಗನ್ ಸಿನಿಮಾದಲ್ಲಿ ಟಿವಿಕೆ ಬಾವುಟ ಬಳಸಲಾಗುತ್ತಿದೆಯಂತೆ. ಅಲ್ಲದೇ ಕೈಯಲ್ಲಿ ಟಿವಿಕೆ ಟ್ಯಾಟು ಕೂಡ ಹಾಕಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪಕ್ಕ ಕಮರ್ಷಿಯಲ್ ಎಮೋಷನಲ್ ಪಾಲಿಟಿಕ್ಸ್ ಡ್ರಾಮ್ ಸಿನಿಮಾ ಎನ್ನಲಾಗುತ್ತಿದೆ, ಎಚ್ ವಿನೋದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.
#JanaNayagan reports suggest that #ThalapathyVijay's character is named Sanjay Varadharajan IPS in the movie. He plays an ex-cop, and there will be a massive political transformation in the film, after which there will be a #TVK reference with the name 'Thalapathy Vetri Kondan'. https://t.co/ZYWH1Ddq4w pic.twitter.com/buRLcQYiKu
— Movies Singapore (@MoviesSingapore) May 6, 2025