ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 78 ನೇ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಹಾಲಿವುಡ್‌ನಿಂದ ಬಾಲಿವುಡ್‌ವರೆಗಿನ ತಾರೆಯರು ತಮ್ಮ ಗ್ಲಾಮರ್ ಪ್ರದರ್ಶಿಸುತ್ತಿದ್ದಾರೆ. ಕಲರ್ ಫುಲ್ ಬಟ್ಟೆ ತೊಟ್ಟು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾನ್ಸ್ ಉತ್ಸವದಲ್ಲಿ ಕನ್ನಡ ನಟಿ ದಿಶಾ ಮದನ್ ಕೂಡ ಹೆಜ್ಜೆ ಹಾಕಿದ್ದರು, ಇದೀಗ ನಟಿ ಜಾನ್ವಿ ಕಪೂರ್ ಮೊದಲ ಬಾರಿಗೆ ಕ್ಯಾನ್ಸ್ ನಲ್ಲಿ ಭಾಗಿಯಾಗಿದ್ದಾರೆ.
Janhvi Kapoor at Cannes film festival 👀 pic.twitter.com/zY1TTYNNNa
— Jeet (@JeetN25) May 20, 2025
ಹೋಮ್ ಬೌಂಡ್ ಸಿನಿಮಾದ ನಾಯಕಿ ಜಾನ್ವಿ ಕಪೂರ್, ಇಶಾನ್ ಖಟ್ಟರ್, ವಿಶಾಲ್ ಜೆತ್ವಾ, ನಿರ್ದೇಶಕ ನೀರಜ್ , ನಿರ್ಮಾಪಕ ಕರಣ್ ಜೋಹರ್ ಕೆಂಪು ಹಾಸಿಗೆ ಮೇಲೆ ಹೆಜ್ಜೆ ಹಾಕಿದ್ದರು. ಜಾಹವ್ನಿ ತೊಟ್ಟು ಗೌನ್ ಎಲ್ಲರ ಗಮನಸೆಳೆದಿದ್ದು, ಇದಕ್ಕೆ ಮೂರುವರೆ ಲಕ್ಷ ರೂ ಎಂದು ಹೇಳಲಾಗುತ್ತಿದೆ.
ಶ್ರೀದೇವಿಗೆ ಗೌರವ
ಜಾನ್ವಿ ಧರಿಸಿದ ಗೌನ್ ಇದೇ ಮಾದರಿಯ ಡ್ರೆಸ್ನ ಶ್ರೀದೇವಿ ಈ ಮೊದಲು ಧರಿಸಿದ್ದರು. ಹೀಗಾಗಿ, ಇದು ಅವರು ತಾಯಿಗೆ ನೀಡುತ್ತಿರುವ ಗೌರವಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.