ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಕೋಶ, ಆಗ್ನೇಯ ಮಧ್ಯ ರೈಲ್ವೆ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಜನಿವಾರ ವಿವಾದ: ಜನರ ನಂಬಿಕೆ ಮೇಲೆ ರಾಜ್ಯ ಸರ್ಕಾರ ಪ್ರಹಾರ: ಪ್ರಹ್ಲಾದ್ ಜೋಶಿ!
ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇವು ಅಪ್ರೆಂಟಿಸ್ ಹುದ್ದೆಗಳು ಆಗಿದ್ದರಿಂದ ಯಾವುದೇ ಪರೀಕ್ಷೆ ಇರುವುದಿಲ್ಲ. ಕೇವಲ ಮೆರಿಟ್ ಲಿಸ್ಟ್ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಭಾರತದಲ್ಲಿ ರೈಲ್ವೆ ಇಲಾಖೆಯು ಅತ್ಯಂತ ದೊಡ್ಡ ಜಾಲ ಹೊಂದಿದೆ. ಅಭ್ಯರ್ಥಿಗಳು ಅಪ್ರೆಂಟಿಸ್ ಆಗಿ ಕೆಲಸ ಮಾಡಿದರೆ ಮುಂದೆ ನೀವು ದೇಶದಲ್ಲಿ ಎಲ್ಲಿಯೇ ಹೋದರು ರೈಲ್ವೆ ಇಲಾಖೆಯಲ್ಲಿ ಒಂದು ಅವಕಾಶ ಸುಲಭವಾಗಿ ಸಿಗಬಹುದು.
ಒಟ್ಟು ಉದ್ಯೋಗಗಳು- 1007
ಅರ್ಜಿ ಶುಲ್ಕ
ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಅರ್ಹತೆ ಆಧಾರಿತವಾಗಿದೆ. ಹೀಗಾಗಿ ಯಾವುದೇ ವರ್ಗಕ್ಕೆ ಅರ್ಜಿ ಶುಲ್ಕ ಇರಲ್ಲ.
ಶೈಕ್ಷಣಿಕ ಅರ್ಹತೆ- 10ನೇ ತರಗತಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕ ಇರಬೇಕು. ಜೊತೆಗೆ ITI ಪ್ರಮಾಣೀಕರಣ ಹೊಂದಿರಬೇಕು.
ವಯೋಮಿತಿ- 15 ರಿಂದ 24 ವರ್ಷದ ಒಳಗಿನವರಿಗೆ ಅವಕಾಶ ಇದೆ
ಹುದ್ದೆಗೆ ಆಯ್ಕೆ ಪ್ರಕ್ರಿಯೆ
ಮೆರಿಟ್ ಲಿಸ್ಟ್
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 04 ಮೇ 2025