Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಜನಿವಾರ ವಿವಾದ ಕೇಸ್: ಬೀದರ್​ನ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿ ಸಸ್ಪೆಂಡ್!

    By AIN AuthorApril 19, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಜನಿವಾರ ವಿವಾದ ಕೇಸ್ ಗೆ ಸಂಬಧಪಟ್ಟಂತೆ ಬೀದರ್​ನ ಸಾಯಿ ಸ್ಪೂರ್ತಿ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿಯನ್ನಿ ಸಸ್ಪೆಂಡ್ ಮಾಡಲಾಗಿದೆ.

    ಕೆಲಸ ಹುಡುಕುತ್ತಿರುವ ಯುವಕರಿಗೆ ಸಿಕ್ತು ಗುಡ್ ನ್ಯೂಸ್: ಇಲ್ಲಿದೆ ಭರ್ಜರಿ ಉದ್ಯೋಗ!

    ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಜನಿವಾರ ಹಾಕಿದ್ದಾನೆಂಬ ಕಾರಣಕ್ಕೆ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಘಟನೆ ಬೀದರ್​ನಲ್ಲಿ ನಡೆದಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇಂದು ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದ ಬೀದರ್ ಜಿಲ್ಲಾಧಿಕಾರಿ ಈ ಘಟನೆಯಲ್ಲಿ ಅಧಿಕಾರದ್ದೇ ತಪ್ಪು ಎಂದು ವರದಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದ ಬೀದರ್​ನ ಖಾಸಗಿ ಕಾಲೇಜಿನ ಪ್ರಾಂಶುಪಾಲ ಮತ್ತು ಆ ಕಾಲೇಜಿನ ಕೆಲವು ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಯ ಜನಿವಾರ ತೆಗೆಸಿದ ಆರೋಪದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪರೀಕ್ಷಾರ್ಥಿಗೆ ಪರೀಕ್ಷೆಗೆ ಅವಕಾಶ ನೀಡದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ.ಜಿ. ಜಗದೀಶ್​ ಆದೇಶ ಹೊರಡಿಸಿದ್ದಾರೆ. ಬೀದರ್​ ಜಿಲ್ಲಾಧಿಕಾರಿಯಿಂದ ವರದಿ ಸಲ್ಲಿಕೆ ಬೆನ್ನಲ್ಲೇ ಕ್ರಮ ಕೈಗೊಳ್ಳಲಾಗಿದೆ. ಬೀದರ್​ನಲ್ಲಿರುವ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್​ ಚಂದ್ರಶೇಖರ ಬಿರಾದಾರ್ ಹಾಗೂ ಆ ಕಾಲೇಜಿನ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಅಮಾನತು ಮಾಡಲಾಗಿದೆ.

    ಬೀದರ್​​ನ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಖಾಸಗೀ ಕಾಲೇಜಾಗಿರುವುದರಿಂದ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಈ ಆದೇಶ ಹೊರಡಿಸಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಮಹಿಳಾ ಅಧಿಕಾರಿಗೆ ರವಿಕುಮಾರ್ ಆ ರೀತಿ ಮಾತಾಡಿದ್ದು ತಪ್ಪು: ಸಂತೋಷ್ ಲಾಡ್!

    July 4, 2025

    ಹುಬ್ಬಳ್ಳಿಯಲ್ಲಿ ಹೈಟೆಕ್ ವೆಶ್ಯಾವಾಟಿಕೆ: ಐವರು ವಿದೇಶಿ ಮಹಿಳೆಯರ ರಕ್ಷಣೆ!

    July 4, 2025

    ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ಇದು ನೀಚ ಕೆಲಸ ಎಂದ HK ಪಾಟೀಲ್

    July 4, 2025

    ಗ್ರಾನೈಟ್‌ಗಳನ್ನು ಸಾಗಿಸುತ್ತಿದ್ದ ಲಾರಿ ಗುಡ್ಡಕ್ಕೆ ಡಿಕ್ಕಿ: ಚಾಲಕ ಗಂಭೀರ, ಓರ್ವ ಸಾವು!

    July 4, 2025

    ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಪ್ರಮುಖ ಆರೋಪಿ ಬಂಧಿಸಿದ NIA

    July 4, 2025

    ಗದಗ| ಲಾರಿ, ಬಸ್ ಹಾಗೂ ಕಾರು ನಡುವೆ ಸರಣಿ ಅಪಘಾತ!

    July 4, 2025

    ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್​ ಶವ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ!

    July 4, 2025

    ಅವಹೇಳನಕಾರಿ ಹೇಳಿಕೆ ಆರೋಪ: ಪೋಕ್ಸೋ ಅತ್ಯಾಚಾರಿಗಳು ಬಿಜೆಪಿಯಲ್ಲೇ ಇದ್ದಾರೆ – ಪ್ರಿಯಾಂಕ್ ಖರ್ಗೆ

    July 4, 2025

    ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆ ಚರ್ಚೆಯಾಗಲ್ಲ: ಶಿವರಾಜ್ ತಂಗಡಗಿ

    July 4, 2025

    ಬೀದರ್: ಅದ್ಧೂರಿಯಾಗಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ

    July 4, 2025

    ಹೃದಯ ಜೋಪಾನ ; ಮಿಮ್ಸ್ ನಲ್ಲಿ ಹೃದಯ ವೈದ್ಯರೇ ಇಲ್ಲ

    July 4, 2025

    ಕಾರು ಹರಿದು ಮೂರು ವರ್ಷದ ಬಾಲಕಿ ಮೃತ್ಯು

    July 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.