ಬೀದರ್ : ಜನಿವಾರ ಹಾಕಿದ್ದಕ್ಕೆ ಕೆ-ಸಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿ ವಂಚಿತನಾದ ಸುಚಿವೃತ್‌ಗೆ ಸಚಿವ ಈಶ್ವರ್ ಖಂಡ್ರೆ ಧೈರ್ಯ ತುಂಬಿದ್ದು, ಬಿಕೆಐಟಿಯಲ್ಲಿ ಉಚಿತ ಸೀಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಬೀದರ್‌ನ ವಂಚಿತ ವಿದ್ಯಾರ್ಥಿ ಸುಚಿವೃತ್ ಮನೆಗೆ ಸಚಿವರಾದ ಜಿಲ್ಲಾ ಉಸ್ತುವಾರಿ ಈಶ್ವರ್ ಖಂಡ್ರೆ, ರಹೀಂಖಾನ್ ಭೇಟಿ ನೀಡಿದ್ದು, ಸುಚಿವೃತ್ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ವಕೀಲರ ಪರಿಷತ್ತಿನ ಸದಸ್ಯ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಬೆಂಗಳೂರಿನಿಂದ ನೇರವಾಗಿ ಬೀದರ್‌ನ ಚೌಬಾರ್ ಬಳಿಯ ಸುಚಿವೃತ್ ಮನೆಗೆ ಭೇಟಿ ನೀಡಿದ ಖಂಡ್ರೆ, ಸುಚಿವೃತ್‌ಗೆ ಆತ್ಮಸ್ಥೈರ್ಯ ಹೇಳಿದರು. ಇದೇ ವೇಳೆ ಪರೀಕ್ಷೆ ವೇಳೆ ಆ ರೀತಿ ಮಾಡಬಾರದಿತ್ತು, ಮಾಡಿದ್ದು ತಪ್ಪು. ಇಂಜಿನಿಯರಿಂಗ್ ಕೋರ್ಸ್ ಮಾಡುತ್ತೀನಿ ಅಂದರೆ ನಮ್ಮ ಕಾಲೇಜಿನಲ್ಲಿಯೇ ಉಚಿತ ಪ್ರವೇಶ ಕೊಡುತ್ತೇವಿ ಅಂತಾ ಭರವಸೆ ನೀಡಿದರು. ಭಾಲ್ಕಿಯ ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಕೊಡುವ ಭರವಸೆ ನೀಡಿದರು.