ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಬೆಳಂಬೆಳಗ್ಗೆ ಜೆಸಿಬಿ ಘರ್ಜನೆ ಘರ್ಜಿಸಿದ್ದು, ಆಶ್ರಯ ಕಾಲೋನಿಯಲ್ಲಿನ ಶೆಡ್ ಗಳ ತೆರವು ಕಾರ್ಯಾಚರಣೆ ನಡೆದಿದೆ.
ವಾರ್ಡ್ ನಂಬರ್ 13ರ ಕೆಂಗೇರಿ ಮಡ್ಡಿಯಲ್ಲಿರುವ ಆಶ್ರಯ ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಾಸವಿದ್ದ 30 ಕುಟುಂಬಗಳ ಶೆಡ್ ತೆರವು ಮಾಡಲಾಗಿದೆ. ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆದಿದ್ದು, 30 ಕುಟುಂಬಗಳು ಇದೀಗ ಆತಂಕದಲ್ಲಿವೆ.
ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವಿಳಂಬ ; ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ವಾರ್ನಿಂಗ್
ಚುನಾವಣೆ ವೇಳೆ ಶಾಸಕರು ಇಲ್ಲೇ ನಿವೇಶನ ಕಲ್ಪಿಸುವ ಭರವಸೆ ನೀಡಿದ್ದರು. ಸ್ಥಳೀಯ ಪುರಸಭೆ ಸದಸ್ಯರ ರಾಜಕೀಯ ತಿಕ್ಕಾಟದಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಸ್ಥಳೀರು ಆರೀಪಿಸಿದ್ದಾರೆ. ಸದ್ಯ ತೆರವು ಕಾರ್ಯಾಚರಣೆ ವೇಳೆ ಯಾರೂ ನೆರವಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.