ಚಿಕ್ಕಬಳ್ಳಾಪುರ:- ಅನುದಾನಕ್ಕೋಸ್ಕರ ಜೆಡಿಎಸ್ ಶಾಸಕರು ಕಾಂಗ್ರೆಸ್ ಬಗ್ಗೆ ಹೊಗಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೊಗಳಿದರೆ ಹೆಚ್ಚು ಅನುದಾನ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿ ಜೆಡಿಎಸ್ ಶಾಸಕರು ಇದ್ದಾರೆ ಎಂಬ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಶಾಸಕ ಮೇಲೂರು ರವಿಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಶಾಸಕ ಪ್ರದೀಪ್ ಈಶ್ವರ್ ಜನಾಶೀರ್ವಾದದಿಂದ ಶಾಸಕರಾಗಿಲ್ಲ. ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ನಡೆದ ಕೆಲ ತಪ್ಪುಗಳಿಂದ ಇವರು ಶಾಸಕರಾಗಿದ್ದಾರೆ. ಮೊದಲು ಅವರು ಆಯ್ಕೆಯಾಗಿರುವ ಕ್ಷೇತ್ರದ ಬಗ್ಗೆ , ಅಲ್ಲಿನ ಜನರ ಬಗ್ಗೆ ಯೋಚಿಸುವುದು ಉತ್ತಮ. ಅದನ್ನು ಹೊರತುಪಡಿಸಿ ಮತ್ತೊಬ್ಬರ ಬಗ್ಗೆ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.