ಬೆಂಗಳೂರು:- ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎನ್ನುವ ರಾಜ್ಯ ಕಾಂಗ್ರೆಸ್ ಮಾಡಿದ್ದೇನು? ಎಂದು ಪರಿಷತ್ ಶಾಸಕ ಹಾಗೂ ಜೆಡಿಎಸ್ ಮುಖಂಡ ಟಿಎ ಶರವಣ ಪ್ರಶ್ನಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯಿಂದ ಬೆಂಗಳೂರು ತತ್ತರಿಸಿದ್ದು, ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಮಳೆ ಹಾನಿ ಪ್ರದೇಶಕ್ಕೆ ಜೆಡಿಎಸ್ ಭೇಟಿ ಕುರಿತು ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು, ಪ್ರತೀ ವರ್ಷ ಮಳೆ ಬಂದಾಗ ಬೆಂಗಳೂರನ್ನು ಸಿಂಗಾಪುರ್ ಮಾಡುತ್ತೇವೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೆವೆ ಎನ್ನುವ ಕಾಂಗ್ರೆಸ್ ಪಕ್ಷ ನಿಜಕ್ಕೂ ಬೆಂಗಳೂರಿಗೆ ಏನು ಮಾಡಿದೆ ಎನ್ನುವುದನ್ನು ಹೇಳಬೇಕು ಎಂದರು.
ಅಧಿಕಾರಕ್ಕೆ ಬಂದಾಗ ಬೆಂಗಳೂರು ನಗರಕ್ಕೆ ಏನೆಲ್ಲ ಆಶ್ವಾಸನೆ ನೀಡಿದ್ದರು ಮತ್ತು ಅದು ಎಷ್ಟು ಅನುಷ್ಠಾನಕ್ಕೆ ಬಂದಿದೆ ಎನ್ನುವುದನ್ನು ಜನ ಪ್ರಶ್ನಿಸುತ್ತಿದ್ದಾರೆ. ಎಲ್ಲ ವಿಭಾಗದಲ್ಲೂ ತೆರಿಗೆ ಹೆಚ್ಚು ಮಾಡುವುದನ್ನು ಬಿಟ್ಟು ಬೇರೆ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಪೂರ್ವ ಮುಂಗಾರು ಯಾವಾಗ ಬರುತ್ತದೆ ಎನ್ನುವುದು ಗೊತ್ತಿರುವುದಿಲ್ಲವೇ? ಅದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಏನು ಮಾಡಿದ್ದೀರಾ? ನೀವು bನಿಮ್ಮ ಸಂಕಲ್ಪ ಸಮಾವೇಶದಲ್ಲೇ ಮುಳುಗಿದ್ದೀರಾ ಹಾಗಾಗಿ ಬೆಂಗಳೂರು ಮುಳುಗಿರುವುದು ನಿಮಗೆ ಕಾಣುತ್ತಿಲ್ಲ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆ ಕಲ್ಲು ಹೊಸ ಬಿಲ್ಲು ಎನ್ನುವಂತೆ ಬಿಬಿಎಂಪಿ ಅನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದ್ದೀರಾ ಹೊರತು ಯಾವುದೇ ಕೆಲಸ ಆಗುತ್ತಿಲ್ಲ. ಯಾವ ಅಧಿಕಾರಿಯೂ ಚುರುಕಿನಿಂದ ಕೆಲಸ ಮಾಡುತ್ತಿಲ್ಲ ಎನ್ನುವುದು ವಿಪರ್ಯಾಸ ಎಂದು ಶರವಣ ಬೇಸರ ವ್ಯಕ್ತಪಡಿಸಿದ್ದಾರೆ.
ಬರಿ ಸಿಟಿ ಟೂರ್ ಮಾಡಿ ಕೃಷ್ಣ ಅಲ್ಲಿ ಹೋಗಿ ಎಸಿ ರೂಮಿನಲ್ಲಿ ಪತ್ರಿಕಾಗೋಷ್ಟಿ ಮಾಡಿದರೆ ಏನು ಪ್ರಯೋಜನ ಆಗುವುದಿಲ್ಲ ಸಿದ್ದರಾಮಯ್ಯನವರೇ , ಡಿಕೆ ಶಿವಕುಮಾರ್ ಅವರೇ. ನಿಮ್ಮ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ನಾಳೆ ನಮ್ಮ ಪಕ್ಷದ ವತಿಯಿಂದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಏನೆಲ್ಲಾ ಸಹಾಯದ ಅಗತ್ಯ ಇದೆಯೋ ಅದನ್ನು ಪೂರೈಸಲಾಗುವುದು ಎಂದರು.
ಜೆಡಿಎಸ್ ಮುಖಂಡರು ಭೇಟಿ ನೀಡುವ ಸ್ಥಳಗಳಿವು:-
ದಿನಾಂಕ 21-05- 25:- ಸಮಯ ಬೆಳಿಗ್ಗೆ 10.30 ಗಂಟೆಗೆ ಜೆ.ಪಿ.ನಗರದ మిని ಫಾರೆಸ್ಟ್ ರಸ್ತೆ ವಲಯದಿಂದ ನಿರ್ಗಮನ.
10.40 ಗಂಟೆಗೆ:- ಜಯನಗರದ ಅರಸು ಕಾಲೋನಿಯಲ್ಲಿ ನೀರು ನುಗ್ಗಿ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಬಗ್ಗೆ ವೀಕ್ಷಣೆ.
11.30 ಘಂಟೆಗೆ: ಮೈಕೋ ಲೇಔಟ್‌ನಲ್ಲಿ ಮಳೆ ಪ್ರವಾಹದಿಂದ ನೀರು ತುಂಬಿದ ಆಪಾರ್ಟ್ ಮೆಂಟ್‌ನಲ್ಲಿ | ವಿದ್ಯುತ್ ಶಾರ್ಟ್ ಸಕ್ಯೂಟಿನಿಂದ ಮರ ಹೊಂದಿದ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವುದು.
ಮಧ್ಯಾಹ್ನ 12.15 ಘಂಟೆಗೆ:- ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಮತ್ತು ಅನಾಹುತಗಳ ವೀಕ್ಷಣೆ.
01-00 ಗಂಟೆಗೆ:- ಪಣತ್ತೂರು ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನಿಂದ ಹಾನಿ.
2-00 ಗಂಟೆಗೆ:- ಸರ್ವಜ್ಞನಗರ-ಸಾಯಿ ಲೇಔಟ್‌ನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಉಂಟಾಗಿರುವ ಹಾನಿ ಬಗ್ಗೆ ವೀಕ್ಷಣೆ ಮತ್ತು ಪರಿಶೀಲನೆ.
-ಹಾನಿಗೊಂಡಿರುವ ಹೆಣ್ಣೂರು ಬ್ರಿಡ್ಜ್ ವೀಕ್ಷಣೆ (ಹೆಚ್.ಬಿ.ಆರ್ 5ನೇ ಬ್ಲಾಕ್.ಕೆ.ಇ.ಬಿ.ಆಫೀಸ್ ಹತ್ತಿರ)..
ಕಾರ್ಯಕ್ರಮದಲ್ಲಿ ಮಾಧ್ಯಮವರು ಭಾಗಿಯಾಗಿ ಯಶಸ್ವಿಯಾಗಿಸಬೇಕೆಂದು ಟಿಎ ಶರವಣ ಅವರು ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.