ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸುಪ್ರೀಂ ಕೋರ್ಟ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ನ ಕಿರಿಯ ನ್ಯಾಯಾಲಯದ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವಂತ ಅಭ್ಯರ್ಥಿಗಳಿಗಾಗಿ ಪರೀಕ್ಷೆಯ ದಿನಾಂಕವನ್ನು ಇಲ್ಲಿ ನೀಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕ ಅನೌನ್ಸ್ ಮಾಡಿದ್ದರಿಂದ ಓದಿನ ಕಡೆಗೆ ಆಕಾಂಕ್ಷಿಗಳು ಹೆಚ್ಚಿನ ಗಮನ ಹರಿಸಬೇಕು. ಈ ಹುದ್ದೆಗಳಿಗೆ ಫೆಬ್ರುವರಿ 5 ರಂದು ಅರ್ಜಿ ಆಹ್ವಾನ ಮಾಡಿದ್ದ ನ್ಯಾಯಾಲಯ ಮಾರ್ಚ್ 03ಕ್ಕೆ ಅರ್ಜಿ ಸಲ್ಲಿಕೆಯ ಕೊನೆ ಮಾಡಿತ್ತು.
13 ಏಪ್ರಿಲ್ 2025ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ದಿನಾಂಕವನ್ನು ತಿಳಿಸಿದೆ. ಸದ್ಯ ಎಕ್ಸಾಂ ದಿನವನ್ನು ತಿಳಿಸಿರುವ ಕಾರಣ ಅರ್ಜಿ ಸಲ್ಲಿಸುವವರು ಹೆಚ್ಚಿನ ಮಟ್ಟದಲ್ಲಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ 4 ಹಂತಗಳಲ್ಲಿ ನಡೆಯಲಿದೆ. ಇದರಲ್ಲಿ ಮೊದಲನೇಯದು 100 ಅಂಕಗಳಿಗೆ ಲಿಖಿತ ಪರೀಕ್ಷೆ ಆಗಿದೆ. ಇದರ ಜೊತೆಗೆ ಕಂಪ್ಯೂಟರ್ ಜ್ಞಾನ Objective Type Test (25 ಪ್ರಶ್ನೆಗಳು), ಕಂಪ್ಯೂಟರ್ ಟೈಪಿಂಗ್ 35 WPM ಹಾಗೂ Descriptive Test ಆಯ್ಕೆ ಪ್ರಕ್ರಿಯೆಯ ಹಂತಗಳು ಆಗಿವೆ.
ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು ಎಂದರೆ ಸುಪ್ರೀಕೋರ್ಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಬಹುದು.