ಉಡುಪಿ:- ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರಾ-1 ಸಿನಿಮಾ ಸೆಟ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಜರುಗಿದೆ.
ಕೇರಳ ಮೂಲದ ಕಪಿಲ್ ಕೊಲ್ಲೂರು ಸಾವನ್ನಪ್ಪಿರುವ ಜೂನಿಯರ್ ಆರ್ಟಿಸ್ಟ್. ಇವರು ಇಲ್ಲಿನ ಸೌಪರ್ಣಿಕಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಹಿಂದೆ ದೈವ ನುಡಿದಂತೆ ಕಾಂತಾರಾ -1 ಚಿತ್ರೀಕರಣಕ್ಕೆ ಸಂಕಷ್ಟ ಎದುರಾದಂತಾಗಿದೆ.