ಬೆಂಗಳೂರು: ರೌಡಿಶೀಟರ್ ಅಂದ ಮಾತ್ರಕ್ಕೆ ಎಲ್ಲರು ರೌಡಿಗಳಾಗಿರುತ್ತಾರೆ ಅಂತ ಭಾವಿಸಬಾರದು ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ನೇಮಕಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು,
Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು..! ತಿಳಿದ್ರೆ ಶಾಕ್ ಆಗ್ತೀರಾ..
ರೌಡಿಶೀಟರ್ ಅಂದ ಮಾತ್ರಕ್ಕೆ ಎಲ್ಲರು ರೌಡಿಗಳಾಗಿರುತ್ತಾರೆ ಅಂತ ಭಾವಿಸಬಾರದು, ಕೆಲವರು ರೌಡಿ ಅಲ್ಲದಿದ್ದರೂ ಅವರ ವಿರುದ್ಧ ರೌಡಿಶೀಟರ್ ಹಾಕಿರಲಾಗಿರುತ್ತೆ, ಕೆಲವರು ರೌಡಿಗಳಾಗಿದ್ದರೂ ಅವರ ವಿರುದ್ಧ ರೌಡಿಶೀಟರ್ ಇರೋದಿಲ್ಲ,
ತನ್ನ ವಿರುದ್ಧವೂ ರೌಡಿಶೀಟರ್ ಅಂತ ದಾಖಲಿಸಲಾಗಿದೆ, ಆದರೆ ತಾನು ರೌಡಿಯಲ್ಲ, ಪಕ್ಷದ ಸಿದ್ಧಾಂತಗಳನ್ನು ಅನುಸರಿಸುವ ಕಾರಣಕ್ಕೆ ರೌಡಿಶೀಟರ್ ಹಾಕಲಾಗಿದೆ, ಯಾರ ವಿರುದ್ಧವೂ ವಿನಾಕಾರಣ ಕೈ ಮಾಡಿದವನಲ್ಲ ಎಂದು ಹೇಳಿದರು.