ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗಿರುವ ಪ್ರಮುಖ ಕಾರಣಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಕೂಡಾ ಒಂದಾಗಿದೆ. ದೇಹದಲ್ಲಿನ ಅಸಮತೋಲಿತ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಅತ್ಯಂತ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು
ಈ 5 ದಿನಗಳು ನಂದಿಬೆಟ್ಟದ ಪ್ರವೇಶ ನಿಷೇಧ.. ಪ್ರವಾಸಿಗಳು ನೋಡಲೇಬೇಕಾದ ಸುದ್ದಿ!
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ಕೆಟ್ಟ ಜೀವನಶೈಲಿಯ ಪರಿಣಾಮವೆಂದೇ ಪರಿಗಣಿಸಲಾಗುತ್ತದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿ ಮತ್ತು ಆಹಾರದ ಮೂಲಕವೂ ಇದನ್ನು ನಿಯಂತ್ರಿಸಬಹುದು.
ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ವೈದ್ಯರು ರಕ್ತದ ಹರಿವನ್ನು ಸುಧಾರಿಸಲು ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಔಷಧಿಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಬಹುದು. ಆದರೆ, ಆರಂಭಿಕ ಹಂತಗಳಲ್ಲಿ, ಇದನ್ನು ಮನೆಮದ್ದುಗಳಿಂದ ನಿಯಂತ್ರಿಸಬಹುದು.
ಕರಿಬೇವು:
ಕರಿಬೇವು ಎಲೆಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಬಹಳ ಪರಿಣಾಮಕಾರಿ. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಅತ್ಯಗತ್ಯ. ಪ್ರತಿದಿನ ಅಡುಗೆಯಲ್ಲಿ 8-10 ಎಲೆಗಳನ್ನು ಬಳಸಬಹುದು. ಅಲ್ಲದೆ, ಕರಿಬೇವಿನ ಎಲೆಗಳ ರಸವನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನವಾಗುವುದು.
ಕೊತ್ತಂಬರಿ ಸೊಪ್ಪು:
ಕೊತ್ತಂಬರಿ ಸೊಪ್ಪನ್ನು ಪ್ರತಿಯೊಂದು ಮನೆಯಲ್ಲೂ ಅಡುಗೆಯಲ್ಲಿ ಬಳಸಲಾಗುತ್ತದೆ. ಇದು ಹೃದಯದ ಆರೋಗ್ಯ ಸುಧಾರಿಸುವಲ್ಲಿ ಬಹಳ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ, ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಗುಣಪಡಿಸಬಹುದು.
ನೇರಳೆ ಹಣ್ಣಿನ ಎಲೆಗಳು :
ನೇರಳೆ ಹಣ್ಣಿನ ಎಲೆಗಳನ್ನು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ಗಳು ಮತ್ತು ಆಂಥೋಸಯಾನಿನ್ಗಳಂತಹ ಗುಣಗಳಿವೆ. ಅವು ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ. ಈ ಎಲೆಗಳನ್ನು ಪುಡಿ ರೂಪದಲ್ಲಿಯೂ ಸೇವಿಸಬಹುದು. ಅಥವಾ ಅದರ ಕಷಾಯವನ್ನು ದಿನಕ್ಕೆ 1-2 ಬಾರಿ ಕುಡಿಯಬಹುದು.
ಮೆಂತ್ಯೆ :
ಮೆಂತ್ಯೆ ಸೊಪ್ಪಿನ ಔಷಧೀಯ ಗುಣಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.
ತುಳಸಿ ಎಲೆಗಳು :
ತುಳಸಿ ಎಲೆಗಳು ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುವಲ್ಲಿಯೂ ಬಹಳ ಪ್ರಯೋಜನಕಾರಿ. ಇದರಲ್ಲಿರುವ ಗುಣಗಳು ಚಯಾಪಚಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದ ತೂಕ ಮತ್ತು ಕೊಬ್ಬನ್ನು ಕಾಪಾಡಿಕೊಳ್ಳುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಬಹುದು.