ಕ್ರಿಕೆಟಿಗ ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ರೈಲಿನಲ್ಲೇ ಅತ್ಯಾಚಾರಕ್ಕೆ ಯತ್ನ: ಕಾಮುಕನಿಂದ ತಪ್ಪಿಸಿಕೊಳ್ಳಲು ರೈಲಿಂದ ಜಿಗಿದ ಮಹಿಳೆ!
ಅಥಿಯಾ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೆ ಎಲ್ ರಾಹುಲ್ ಅವರು ತಂದೆಯಾಗಿ ಬಡ್ತಿ ಪಡೆದಿದ್ದಾರೆ. ನಟಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ ಎಲ್ ರಾಹುಲ್ ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.
ಇಂದು ಅಥಿಯಾ ಶೆಟ್ಟಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಇವರಿಬ್ಬರು “ನಮಗೆ ಮುದ್ದಾದ ಆಶೀರ್ವಾದವೊಂದು ಬೇಗನೇ ಬರಲಿದೆ” ಅಂತ ಬರೆದುಕೊಂಡಿದ್ದರು. ಇನ್ನು ಒಂದು ಕೆಟ್ಟ ದೃಷ್ಟಿ ತಡೆಯುವ ಗೊಂಬೆ, ನಕ್ಷತ್ರಗಳ ಜೊತೆಗೆ ಒಂದು ಮಗುವಿನ ಕಾಲುಗಳ ಚಿತ್ರ ಇರುವ ಇಮೋಜಿಯನ್ನು ಕೂಡ ಹಂಚಿಕೊಂಡಿದ್ದರು. ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಇವರ ಪೋಸ್ಟ್ಗೆ ಶುಭಾಶಯಗಳನ್ನು ತಿಳಿಸಿದ್ದರು. ವಾಣಿ ಕಪೂರ್, ಶಿಬಾನಿ ಅಖ್ತರ್, ನಟಿ ರಿಯಾ ಕಪೂರ್, ಇಶಾ ಗುಪ್ತಾ, ಅಹಾನ್ ಶೆಟ್ಟಿ ಮುಂತಾದವರು ಶುಭಾಶಯ ತಿಳಿಸಿದ್ದರು