ಚಿಕ್ಕೋಡಿ:- ಇಲ್ಲಿನ ಕಬ್ಬೂರ ಪಟ್ಟಣ ಪಂಚಾಯತಿ ಮುಖ್ಯಧಿಕಾರಿಯು ತುಘಲಕ್ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ ಸಾರ್ವಜನಿಕರು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಅಂಗನವಾಡಿ ಸಹಾಯಕಿಯಿಂದ ಲಂಚಕ್ಕೆ ಬೇಡಿಕೆ: ಲಾಕ್ ಆದ ಅಧಿಕಾರಿ, ಸಿಬ್ಬಂದಿ!
ಕಬ್ಬೂರ ಗ್ರಾಮವು ಕೆಲವು ವರ್ಷಗಳಿಂದ ಪಟ್ಟಣ ಪಂಚಾಯತಿಯಾಗಿ ರಚನೆ ಆಗಿದೆ. ಆದರೆ ಇದುವರೆಗೂ ಯಾವುದೇ ಆಡಳಿತ ಮಂಡಳಿ ರಚನೆಯಾಗದೆ ಇದ್ದ ಕಾರಣ ಮುಖ್ಯಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಆದರೆ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಸರಿಯಾದ ಪಲಾನುಭವಿಗಳಿಗೆ ನೀಡದೆ ಬೇಕಾಬಿಟ್ಟಿಯಾಗಿ ಸ್ಥಳೀಯರ ಗಮನಕ್ಕೆ ತರದೇ ಹಂಚುತ್ತಿದ್ದಾರೆ.
ಇದೇ ರೀತಿಯ ತಾರತಮ್ಯ ಮಾಡುವುದನ್ನು ಕಂಡು ಪಟ್ಟಣದ ಹಿರಿಯರು ಯುವಕರು ಪಟ್ಟಣ ಪಂಚಾಯತಿಗೆ ಬೀಗ ಜಡಿದು ತಹಸೀಲ್ದಾರರು ಬರುವವರೆಗೂ ಮಳೆಯಲ್ಲಿಯೇ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಗ್ರಾಮಿಣ ಮಟ್ಟದಲ್ಲಿ ಹೊಸದಾಗಿ ಗ್ರಾಮ ಪಂಚಾಯತಿ ರಚಿಸಿ ಕೂಡಬೇಕೆಂದು ಪಟ್ಟುಹಿಡಿದರು.
ತಹಸೀಲ್ದಾರ್ ಸಾಹೇಬರು ಸಾರ್ವಜನಿಕರ ಮನವಿಗೆ ಸ್ಪಂದಿಸಿ ಅಧಿಕಾರಿಗೆ ನೋಟಿಸ್ ಕೊಡುತೇವೆ ಎಂದು ಭರವಸೆ ನೀಡಿ ಕಚೇರಿಯಲ್ಲಿ ಇದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅಂಬಾಪ್ರಸಾದ್ ನರೊಟ್ಟಿ , ಅಮೀರಸಾಬ್ ಮುಲ್ತಾನಿ, ಶಂಕರ ದಳವಾಯಿ, ಸಿದ್ದಪ್ಪ ಘೇವಾರಿ, ರಾಮು ಪೂಜೇರಿ, ಸುರೇಶ ಭಗವತಿ, ಸಿದ್ರಾಮ ನಾಯಿಕ, ಹಾಲಪ್ಪ ಹೊಸೂರೆ, ಈರಪ್ಪ ನಾಯಕ, ನಾಗಪ್ಪ ಬಾಡದವರ, ಶಂಕರ್ ಪೂಜೇರಿ, ಸುಧೀರ್ ತೋರನಹಳ್ಳಿ, ಮಹದೇವ ದೇಸಾಯಿ, ಮುರಳಿಧರ್ ದಳವಾಯಿ, ಭೂತಪ್ಪ ಹಿರೇಕುರಬರ, ಭೀಮಪ್ಪ ಬೆಳಗಲಿ, ಕುಮಾರ ಮಂಟೂರ, ದೇವಪ್ಪ ರೊಟ್ಟಿ, ಗಂಗಪ್ಪ ಬಾನಿ, ಶಂಕರ ಕಾಡೇಶಗೋಳ ಉಪಸ್ಥಿತರಿದ್ದರು.
ವರದಿ : ಎಂ. ಕೆ. ಸಪ್ತಸಾಗರ
AIN news ಚಿಕ್ಕೋಡಿ