ಭಾರತದ ಕ್ಷಿಪಣಿ ತಜ್ಞ ಎಪಿಜೆ ಅಬ್ದುಲ್ ಕಲಾಂ ಅವರ ಯಶೋಗಾಥೆ ಈಗ ಸಿನಿಮಾವಾಗುತ್ತಿದೆ, ಬಹಳ ದಿನಗಳಿಂದ ಈ ಬಗ್ಗೆ ಚರ್ಚೆ ಇತ್ತು. ಇದೀಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜೀವನಗಾಥೆಗೆ ಹೀರೋ, ನಿರ್ದೇಶಕ ಯಾರು ಅನ್ನೋದು ಫೈನಲ್ ಆಗಿದೆ.
ಎಪಿಜೆ ಅಬ್ದುಲ್ ಕಲಾಂ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಧನುಷ್ ನಾಯಕನಾಗಿ ನಟಿಸುತ್ತಿದ್ದು, ಆದಿಪುರುಷ ಸಿನಿಮಾ ಮಾಡಿದ್ದ ಓಂ ರಾವ್ ಈ ಚಿತ್ರದ ಸೂತ್ರಧಾರ. ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂಬ ಟೈಟಲ್ ಸಿನಿಮಾಗೆ ಇಡಲಾಗಿದೆ. ಕಾನ್ಸ್ ನಲ್ಲಿ ನಡೆಯುತ್ತಿರುವ ಸಿನಿಮೋತ್ಸಾವದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಚಿತ್ರ ಡಾ. ಕಲಾಂ ಅವರ ಅಸಾಧಾರಣ ಪ್ರಯಾಣವನ್ನು ಹೇಳುತ್ತದೆ. ರಾಮೇಶ್ವರಂನಿಂದ ಕ್ಷಿಪಣಿ ತಜ್ಞರಾಗಿ ಅವರು ಖ್ಯಾತಿ ಗಳಿಸಿದ ಜರ್ನಿ, ಭಾರತದ 11 ನೇ ರಾಷ್ಟ್ರಪತಿಯಾಗಿ ಅವರ ಅಧಿಕಾರ ನಡೆಸಿದ ಕ್ಷಣ, ವಿಜ್ಞಾನಿ, ಕವಿ, ಶಿಕ್ಷಕ ಮತ್ತು ತತ್ವಜ್ಞಾನಿಯನ್ನೂ ಅನ್ವೇಷಿಸುವ ಗುರಿಯನ್ನು ಈ ಚಿತ್ರ ಹೊಂದಿದೆ.
ಆತ್ಮಚರಿತ್ರೆ ವಿಂಗ್ಸ್ ಆಫ್ ಫೈರ್ ನಿಂದ ಪ್ರೇರಿತವಾದ ಈ ಕಥೆಯನ್ನು ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕರಾದ ಅಭಿಷೇಕ್ ಅಗರ್ವಾಲ್ , ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದಾರೆ. ಸೈವಿನ್ ಕ್ವಾಡ್ರಾಸ್ ಅವರು ಈ ಸಿನಿಮಾಗೆ ಚಿತ್ರಕಥೆ ಬರೆಯುತ್ತಿದ್ದಾರೆ.
View this post on Instagram