ಹುಬ್ಬಳ್ಳಿ: ಕನ್ನಡ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ನಟ ಕಮಲ್ ಹಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶದ ಕಟ್ಟೆಯೊಡೆದಿದೆ.
ಕನ್ನಡ ಭಾಷೆಗೆ ಧಕ್ಕೆ ತರೋ ಮಾತನ್ನು ನಾವು ಒಪ್ಪಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾಎಎ. ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂಬ ಕಮಲಹಾಸನ್ ಹೇಳಿಕೆಗೆ ಕಿಡಿಕಾರಿದ ಲಾಡ್, ಅವರವರ ಅಭಿಪ್ರಾಯವನ್ನು ಅವರು ಹೇಳ್ತಾರೆ. ನಾವು ಕರ್ನಾಟಕದವರು, ನಾವು ಕನ್ನಡಿಗರು. ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನವಿದೆ. ನಮ್ಮ ಭಾಷೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಒಪ್ಪಲ್ಲ. ಆದರೆ ಇಂತಹ ಮಾತನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಕಮಲ್ ಹಾಸನ್ ಸಾಂಸಾರಿಕ ಜೀವನ, ರಾಜಕೀಯ ಜೀವನ ಸರಿಯಿಲ್ಲ. ಎಲ್ಲದ್ರಲ್ಲಿಯೂ ಎಕ್ಕುಟ್ಟೋಗಿದ್ದಾರೆ: ಪ್ರವೀಣ್ ಶೆಟ್ಟಿ
ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ
ಬಿಜೆಪಿಯಿಂದ ಉಚ್ಚಾಟಿತ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಪಕ್ಷಕ್ಕೆ ಬಂದರೆ ಸ್ವಾಗತ. ಇಬ್ಬರನ್ನೂ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಇಬ್ಬರು ಶಾಸಕರ ಜೊತೆ ಮತ್ತಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಬಹುದು. ಪಕ್ಷದ ಸಿದ್ಧಾಂತ ಒಪ್ಪಿ ಬರೋರಿಗೆ ಸ್ವಾಗತವಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಾಯಕತ್ವ ಒಪ್ಪಿ ಬಂದರೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಬರುವವರನ್ನ ತಗೋಬೇಕೋ, ಬೇಡವೊ ಅನ್ನೋದನ್ನ ಪಕ್ಷ ನಿರ್ಧರಿಸುತ್ತೆ ಎಂದು ಹುಬ್ಬಳ್ಳಿ ತಾಲೂಕಿನ ಇಂಗಳ ಹಳ್ಳಿಯಲ್ಲಿ ಸಂತೋಷ್ ಲಾಡ್ ಹೇಳಿದ್ದಾರೆ.