ಬಾಲಿವುಡ್ ಚಿತ್ರರಂಗದ ಮೋಸ್ಟ್ ಕಾಂಟ್ರವರ್ಸಿಯಲ್ ಕ್ವೀನ್ ಅಂದ್ರೆ ಎಲ್ಲರೂ ಬೊಟ್ಟು ಮಾಡೋದು ಕ್ವೀನ್ ಕಂಗನಾ ರಣಾವತ್ ಕಡೆಗೆ. ಕಂಗನಾ ಈಗಂತೂ ನಟಿ ಜೊತೆಗೆ ಸಂಸದೆಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದರ ಜೊತೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹೊಸ ಕೆಫೆ ತೆರೆದಿದ್ದಾರಂತೆ. ಆದರೆ ಬಿಜೆಪಿಯ ಸಂಸದೆಗೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಕರೆಂಟ್ ಶಾಕ್ ಕೊಟ್ಟಿದೆ. ಮನಾಲಿಯ ಕಂಗಾನ ಮನೆ ಇದೆ. ಆದರೆ ಅವರು ಅಲ್ಲಿ ವಾಸವಿಲ್ಲ. ಆದರೂ ಒಂದು ಲಕ್ಷ ಕರೆಂಟ್ ಬಿಲ್ ಬಂದಿದೆ. ಇದನ್ನು ನೋಡಿ ಕಂಗನಾ ರಂಗ್ ಆಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ತಿಂಗಳು ನಾನು ವಾಸಿಸದ ಮನಾಲಿಯ ನನ್ನ ಮನೆಗೆ 1 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಇದು ತುಂಬಾ ಶೋಚನೀಯ ಸ್ಥಿತಿಯಾಗಿದೆ. ನಾನು ಅದನ್ನು ನೋಡಿದೆ. ಇಲ್ಲಿ ಏನಾಗುತ್ತಿದೆಯೋ ಅದು ನಾಚಿಗೆ ಪಡುವ ಸಂಗತಿ. ಆದರೆ ನಮಗೆ ಅವಕಾಶವಿದೆ. ನೀವೆಲ್ಲರೂ ಕಷ್ಟಪಟ್ಟು ಕೆಲಸ ಮಾಡುವ ಜನ ಎಂದಿದ್ದಾರೆ.
ಕಂಗನಾ ಸಿನಿಮಾ ವಿಚಾರವಾಗಿ ಬರುವುದಾದರೆ ಕಂಗನಾ ರಣಾವತ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಆರ್ ಮಾಧವನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದ್ರೆ ಆ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಕ್ವೀನ್ 2 ಮತ್ತು ತನು ವೆಡ್ಸ್ ಮನು 3 ನಲ್ಬಲಿಯೂ ಕಂಗನಾ ನಟಿಸಲಿದ್ದಾರಂತೆ. ಆದರೆ, ಚಿತ್ರದ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ.