ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ಕೀರ್ತಿರಾಜ್ ಪುತ್ರ ಧರ್ಮ ಕೀರ್ತಿರಾಜ್ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಣ್ ಕಣ್ ಸಲಿಗೆ ಅಂತಾ ಕನ್ನಡ ಪ್ರೇಕ್ಷಕರನ್ನು ನವಗ್ರಹ ಸಿನಿಮಾ ಮೂಲಕ ಸೆಳೆದಿದ್ದ ಧರ್ಮ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಹೋಗಿ ಬಂದ್ಮೇಲೆ ಧರ್ಮ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡದಲ್ಲಿ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಧರ್ಮ ಕೀರ್ತಿ ರಾಜ್ ಮೊದಲ ಬಾರಿಗೆ ಟಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಧರ್ಮ ಮೊದಲ ತೆಲುಗು ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಮೆಚ್ಚಿರುವ ಅಪ್ಸರಾ ರಾಣಿ ನಾಯಕಿ ಅನ್ನೋದು ವಿಶೇಷ..
ಬೋಲ್ಡ್ ಪಾತ್ರಗಳ ಮೂಲಕವೇ ಖ್ಯಾತಿ ಗಳಿಸಿರುವ ಅಪ್ಸರಾ ರಾಣಿ ಹಾಗೂ ಧರ್ಮ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಜೋಡಿ ಹೊಸ ಚಿತ್ರಕ್ಕೆ ಬ್ಲಡ್ ರೋಸಸ್ ಎಂಬ ಟೈಟಲ್ ಇಡಲಾಗಿದೆ. 2019ರಲ್ಲಿ ಅಪ್ಸರಾ ಚಿತ್ರರಂಗಕ್ಕೆ ಕಾಲಿಟ್ಟರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಗ್ಲಾಮರ್ ಆಗಿ ಅಭಿನಯಿಸಿದ್ದರು. ಆರ್ ಜಿವಿ ನೆಚ್ಚಿನ ನಾಯಕಿ ಅಪ್ಸರಾ ರಾಣಿ ಅನ್ನೋ ಮಾತಿದೆ.