ಗೌರಿ ಸಿನಿಮಾ ಮೂಲಕ ಕನ್ನಡ ಸಿನಿಮಾಪ್ರೇಮಿಗಳಿಗೆ ಪರಿಚಿತರಾಗಿರುವ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಕನ್ನಡದ ಹೃತಿಕ್ ರೋಷನ್ ಎಂದು ಕರೆಸಿಕೊಳ್ಳುವ ಅವರು, ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಡಿಸೈನರ್ ಬಟ್ಟೆಯಲ್ಲಿ ಮದು ಮಗನಂತೆ ಮಿಂಚಿದ್ದಾರೆ. ವಜ್ರಕಾಯ ಸಿನಿಮಾದ ನಟಿ ಶುಭ್ರಾ ಅಯ್ಯಪ್ಪ ಸಾಥ್ ಕೊಟ್ಟಿದ್ದಾರೆ.
ಸಮರ್ಜಿತ್ ಲಂಕೇಶ್ ರಾಂಪ್ ವಾಕ್ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಕೆಂಪು ಬಣ್ಣದ ರಾಜ ಗಾಂಭೀರ್ಯದ ಉಡುಪಿನಲ್ಲಿ ಮಿಂಚಿದ ಸಮರ್ಜಿತ್ ಅವರ ಆತ್ಮವಿಶ್ವಾಸದ ನಡಿಗೆ ಮತ್ತು ಆಕರ್ಷಕ ವ್ಯಕ್ತಿತ್ವವು ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಸಮರ್ಜಿತ್ ಲಂಕೇಶ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಸುದ್ದಿ ಇದೆ. ಈ ಹಿಂದೆ ಬಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆಯೊಟ್ಟಿಗೆ ಸಮರ್ಜಿತ್ ಸಿನಿಮಾ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಅವರು ತಮ್ಮ ಚೊಚ್ಚಲ ಹಿಂದಿ ಚಿತ್ರದ ಚಿತ್ರೀಕರಣ ಕೂಡ ಇದೀಗ ಮುಗಿಸಿದ್ದಾರೆ ಎನ್ನಲಾಗುತ್ತಿದೆ.