ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಸಿನಿಮಾರಂಗಕ್ಕೆ ವಿದಾಯ ಹೇಳಿ ಪತಿ-ಮಕ್ಕಳು ಅಂತಾ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್ ನಲ್ಲಿ ಪ್ರತ್ಯಕ್ಷರಾಗಿದ್ದ ಅಮ್ಮು ಈಗ ಹಿಮದ ರಾಶಿ ಮಧ್ಯೆ ಕೂಲ್ ಕೂಲ್ ಪೋಸ್ ಕೊಟ್ಟಿದ್ದಾರೆ.
ಬೀಸಿಗೆ ಬಿಸಿಲಿಗೆ ಜನ ಬಸವಳೆದಿದ್ದು, ಇನ್ನೂ ಬೆಂಗಳೂರಿನಲ್ಲಿಯೂ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಹೀಗಾಗಿ ಕೂಲ್ ವೆದರ್ ಬಯಸಿ ಅಮೂಲ್ಯ ಹಿಮ ತುಂಬಿದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಯಾವುದು ಆ ಹಿಮದ ರಾಶಿಯ ಜಾಗ ಅನ್ನೋದನ್ನು ರಿವೀಲ್ ಮಾಡದ ಹಿಮಗಳ ರಾಶಿ ಮಧ್ಯೆ ನಿಂತು ಚೆಂದದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಹಳದಿ ಹಾಗೂ ಕಪ್ಪು ಬಣ್ಣದ ಬಟ್ಟೆ ತೊಟ್ಟು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಗೋಲ್ಡನ್ ಕ್ವೀನ್ ಗೆ ಗೆಳತಿ ಕೂಡ ಸಾಥ್ ಕೊಟ್ಟಿದ್ದಾರೆ. ಇಬ್ಬರ ಮಕ್ಕಳ ತಾಯಿಯಾದರೂ ಅಮೂಲ್ಯ ಫಿಟ್ ಅಂಡ್ ಫೈನ್ ಆಗಿದ್ದು, ಅಭಿಮಾನಿಗಳು ಮತ್ತೆ ಸಿನಿಮಾಕಡೆ ಮುಖ ಮಾಡಿ ಅಂತಾ ಬೇಡಿಕೆ ಇಡುತ್ತಿದ್ದಾರೆ.