Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೊಡವ ಕಾಂಟ್ರೋವರ್ಸಿ: ರಶ್ಮಿಕಾ ಮಂದಣ್ಣ ಪರ ಬ್ಯಾಟ್‌ ಬೀಸಿದ ಕೊಡವತಿ ಹರ್ಷಿಕಾ!

    By Author AINJuly 5, 2025
    Share
    Facebook Twitter LinkedIn Pinterest Email
    Demo

    ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ವಿವಾದ ಮೇಲೆ ಎಳೆದುಕೊಂಡಿದ್ದಾರೆ. ಮಂಕು ಬುದ್ದಿ ಮಂದಣ್ಣ ವಿಡಿಯೋ ನೋಡಿ ಸಿನಿರಸಿಕರು, ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ ಯಾವ ಸಮುದಾಯದವರು ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಈ ನಡುವೆ ಕಿರಿಕ್‌ ಹುಡ್ಗಿ ಪರ ಕೊಡವತಿ ಹರ್ಷಿಕಾ ಬ್ಯಾಟ್‌ ಬೀಸಿದ್ದಾರೆ.

    ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟಿ ಹರ್ಷಿಕಾ ಪೂಣಚ್ಚ, ಇದನ್ನೂ ವಿವಾದ ಅಂತ ಹೇಳೋದಿಲ್ಲ. ಯಾವುದೋ ಸಂದರ್ಶನವೊಂದರಲ್ಲಿ ಗೊತ್ತಿಲ್ಲದೇ ಮಾತಾಡಿದ್ದಾರೆ ಅನ್ಸುತ್ತೆ. ತೆಲುಗು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ನಾನು ಹೆಸರು ಮಾಡಿದ್ದೇನೆ ಅನ್ನೋ ಅರ್ಥದಲ್ಲಿ ಹೀಗೆ ಹೇಳಿರಬಹುದು. ಅದೇ ವೇಳೆ ನಾನೇ ಫಸ್ಟ್​ ಅನ್ನೋದು ಬಂದಿದೆ. ಹಾಗೇ ನೋಡೋದಕ್ಕೆ ಹೋದ್ರೇ ನಾವು ಆಗ ಹುಟ್ಟೇ ಇರಲಿಲ್ಲ. ಆಗಿನ ಕಾಲದಲ್ಲೇ ಡಾ. ರಾಜ್​ ಕುಮಾರ್​ ಅವರ ಜೊತೆಗೆ ಕೊಡಗಿನ ಶಶಿಕಲಾ ನಟನೆ ಮಾಡಿದ್ದಾರೆ ಎಂದರು.

    ಇನ್ನೂ, ಮಾತನ್ನು ಮುಂದುವರೆಸಿದ ಅವರು, ನಾವೆಲ್ಲ ನಟಿ ಪ್ರೇಮಾ ಅವರನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಅವರು ಎಂತಹ ಅದ್ಭುತ ನಟಿ. ಸಿನಿಮಾನೇ ಅವರಿಂದ ನಡೆಯುತ್ತಾ ಇತ್ತು. ಅವರು ಸಿನಿಮಾದಲ್ಲಿ ಇದಾರೆ ಎಂದರೆ ಸಖತ್​ ಬ್ಯುಸಿನೆಸ್ ಆಗೋದು. ಈಗಿನ ಕಾಲದಲ್ಲಿ ಸಾಕಷ್ಟು ನಟಿಯರು ಕೊಡಗಿನವರಾಗಿದ್ದಾರೆ. ಆದ್ರೆ ಬಾಯ್ತಪ್ಪಿ ಹಾಗೇ ಹೇಳಿದ್ದಾರೆ ಅನ್ಸುತ್ತೆ. ನನಗೆ ರಶ್ಮಿಕಾ ಮಂದಣ್ಣ ಮೇಲೆ ತುಂಬಾ ಗೌರವ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮೂದಾಯಕ್ಕೆ ಹೆಸರನ್ನು ತಂದು ಕೊಟ್ಟಿದ್ದಾರೆ. ನಮಗೆ ರಶ್ಮಿಕಾ ಮಂದಣ್ಣ ಅವರ ಮೇಲೆ ಹೆಮ್ಮೆ ಇದೆ. ತುಂಬಾ ಹೆಸರು ಮಾಡಿದ್ದಾರೆ. ರಶ್ಮಿಕಾ ಗೊತ್ತಿಲ್ಲದೇ ತಪ್ಪು ಮಾಡಿರಬಹುದು. ಎಲ್ಲರೂ ಅವರನ್ನು ಕ್ಷಮಿಸೋಣ, ಚಿಕ್ಕ ಹುಡುಗಿ ಎಲ್ಲೋ ತಪ್ಪು ಮಾಡಿದ್ದಾರೆ.

    ಏನಿದು ವಿವಾದ?

    ಸಂದರ್ಶನವೊಂದಲ್ಲಿ ರಶ್ಮಿಕಾ ಮಂದಣ್ಣ, ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ ಅಂತ ನನಗನಿಸುತ್ತೆ, ಇಡೀ ಸಮುದಾಯದಲ್ಲಿ ನಾನೇ ಮೊದಲು ಇಂಡಸ್ಟ್ರಿಗೆ ಬಂದಿದ್ದು ಎಂದಿದ್ದಾರೆ.

     

    Demo
    Share. Facebook Twitter LinkedIn Email WhatsApp

    Related Posts

    ಸಿದ್ದರಾಮಯ್ಯ, ಡಿಕೆಶಿ ಜಗಳದಲ್ಲಿ ಕೂಸು ಬಡವಾದಂತಾಗಿದೆ ರಾಜ್ಯದ ಸ್ಥಿತಿ: ರೇಣುಕಾಚಾರ್ಯ

    July 5, 2025

    Malleswaram Bomb Blast: 30 ವರ್ಷ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಅರೆಸ್ಟ್..!

    July 5, 2025

    ಸ್ನೇಹಿತನಿಗೆ ಮುಹೂರ್ತವಿಟ್ಟು ಸುಲಿಗೆ ಮಾಡಿದ್ದ ಆರೋಪಿಗಳು ಅರೆಸ್ಟ್..!

    July 5, 2025

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ..ಸುದೀಪ್‌ 47ನೇ ಸಿನಿಮಾ ಅನೌನ್ಸ್

    July 5, 2025

    ಇಂದಿನಿಂದ Neeraj Chopra Classic ಶುರು: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ಭಾರೀ ಬದಲಾವಣೆ

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

    July 5, 2025

    ಬಿಕಿನಿಯಲ್ಲಿ ಬಿಸಿ ಏರಿಸಿದ ದರ್ಶನ ನಟಿ..ಬೀಚ್‌ನಲ್ಲಿ ಪ್ರಣಿತಾ ಸೌಂದರ್ಯ ಸಮರ! Photo ಆಲ್ಬಂ!

    July 5, 2025

    ಚಿನ್ನದ ಅರಗಿಣಿಗೆ ಬಿಗ್‌ ಶಾಕ್…ರನ್ಯಾ ರಾವ್ ಆಸ್ತಿ ಜಪ್ತಿ ಮಾಡಿದ ED!

    July 5, 2025

    ʼವೈರಲ್‌ ವಯ್ಯರಿʼಯಾದ ಶ್ರೀಲೀಲಾ…ಜನಾರ್ಧನ ರೆಡ್ಡಿ ಮಗನ ಜೊತೆ ಡ್ಯಾನ್ಸೋ ಡ್ಯಾನ್ಸ್!

    July 5, 2025

    Namma metro: ಬೆಂಗಳೂರಿಗರಿಗೆ ಸಂತಸದ ಸುದ್ದಿ: ಹಳದಿ ಮೆಟ್ರೋ ಸೇವೆಗೆ ದಿನಾಂಕ ಫಿಕ್ಸ್..!

    July 5, 2025

    Video: ಸಂಸದ ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ ಆಗಮನ..ಪತ್ನಿ ಮೊಗದಲ್ಲಿ ಸಂತಸ!

    July 5, 2025

    ಅಜಿತ್‌ ಬಳಿಕ ಕಾರ್‌ ರೇಸ್‌ಗಿಳಿಂದ ಮತ್ತೊಬ್ಬ ಸೌತ್‌ ಸ್ಟಾರ್….ಬೆಂಗಳೂರು ತಂಡ ಖರೀದಿಸಿದ್ಯಾರು?

    July 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.