ಬೆಂಗಳೂರು: ಸಂಕಷ್ಟದಲ್ಲಿರೋ ಕನ್ನಡ ಸಿನಿಮಾ ಇಂಡಸ್ಟ್ರಿ ಯನ್ನ ಉಳಿಸಲು ಕೊನೆಗೂ ಕನ್ನಡದ ಸ್ಟಾರ್ ನಟರು ಮುಂದಾಗಿದ್ದಾರೆ. ಶಿವಣ್ಣ ಮನೆಯಲ್ಲಿ ಇಂದು ಬೆಳಗ್ಗೆ ಸೀಕ್ರೆಟ್ ಮೀಟಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಯಾಂಡಲ್ವುಡ್ ಲೀಡರ್ ಶಿವಣ್ಣನ ಮುಂದಾಳತ್ವದಲ್ಲಿ ನಾಗವಾರದ ನಿವಾಸದಲ್ಲಿ ಸಭೆ ನಡೆಸಲಾಗಿದೆ.
ಗಣೇಶ್, ದುನಿಯಾ ವಿಜಯ್, ಧ್ರುವ ಸೇರಿದಂತೆ ಹಲವು ನಟರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದ್ದು, ಸಿನಿಮಾ ಪ್ರದರ್ಶಕರು ಮತ್ತು ವಿತರಕರು, ಕೂಡ ಮೀಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಸದ್ಯದಲ್ಲೇ ಎಲ್ಲಾ ನಟರು ಸಿಎಂ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ಸಾಧ್ಯತೆಯಿದ್ದು,
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಥೀಯೇಟರ್ಗೆ ಜನ ಬರುತ್ತಿಲ್ಲ,ಕನ್ನಡಸಿನಿಮಾಗಳಿಗೆ ಥೀಯೇಟರ್ ಕೊರತೆ, ಟಿಕೆಟ್ ಬೆಲೆ ವಿಚಾರ, ದಿನೇ ದಿನೇ ಕಡಿಮೆ ಆಗುತ್ತಿರೋ ಕನ್ನಡ ಸಿನಿಮಾಗಳು, ಪ್ರೊಡ್ಯೂಸರ್ಗಳ ಸಂಕಷ್ಟ, ವಿತರಕರು-ಪ್ರದರ್ಶಕರ ಸಂಕಷ್ಟ ಹೀಗೇ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡೋ ಸಾಧ್ಯತೆಯಿದೆ.