ಗಟ್ಟಿಮೇಳ ಧಾರಾವಾಹಿ ಮೂಲಕ ವೀಕ್ಷಕರ ಮನೆ ಮಾತಾಗಿದ್ದ ನಟಿ ನಿಶಾ ರವಿಕೃಷ್ಣನ್. ಈ ಸೀರಿಯಲ್ ಅವರು ರೌಡಿಬೇಬಿ ಅಂತಾ ಖ್ಯಾತಿ ಪಡೆದಿದ್ದರು. ಸದ್ಯ ಅಣ್ಣಯ್ಯ ಧಾರಾವಾಹಿ ಪಾರ್ವತಿ ಪಾತ್ರದಲ್ಲಿ ನಿಶಾ ಮಿಂಚುತ್ತಿದ್ದಾರೆ. ಅಲ್ಲದೇ ತೆಲುಗು, ತಮಿಳು ಸೀರಿಯಲ್ ನಲ್ಲಿಯೂ ಅವರು ಮಿಂಚುತ್ತಿದ್ದಾರೆ.
ತೆಲುಗಿನ ಅಮ್ಮಾಯಿಗಾರು ಸೀರಿಯಲ್ ನಲ್ಲಿ ನಿಶಾ ಜೊತೆಗೆ ಕನ್ನಡದ ಹುಡ್ಗ ಯಶ್ವಂತ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಈ ನಡುವೆ ಶೋವೊಂದರಲ್ಲಿ ಈ ಜೋಡಿಗೆ ಟಾಸ್ಕ್ ವೊಂದನ್ನು ಕೊಡಲಾಗಿತ್ತು. ಯಶ್ವಂತ್ ತಮ್ಮ ತುಟಿಗೆ ಲಿಪ್ ಸ್ಟಿಕ್ ಹಾಕಿ ನಿಶಾಗೆ ಚುಂಚಿಸುವ ಟಾಸ್ಕ್ ಇಡಲಾಗಿತ್ತು. ಇದರಲ್ಲಿ ಯಶ್ವಂತ್ ಯಾವುದೇ ಮುಜುಗರವಿಲ್ಲದ ನಿಶಾಗೆ ಕಿಸ್ ಮಾಡಿದ್ದಾರೆ. ಆದ್ರೆ ನಿಶಾಗೆ ಸ್ವಲ್ಪ ಇರುಸು ಮುರುಸು ಆದಂತಿದೆ. ಆದರೆ ಅದನ್ನು ಅವರು ತೋರಿಸಿಕೊಂಡಂತಿಲ್ಲ. ಆದ್ರೆ ಈ ಶೋ ನೋಡಿ ನೆಟ್ಟಿಗರು ಕ್ಯಾಕರಿಸಿ ಉಗಿದಿದ್ದಾರೆ.
ಸೆನ್ಸಾರ್ ಬೋರ್ಡ್ ಅವರು ಈ ಟಿವಿ ಶೋ ಕಡೆ ಸ್ವಲ್ಪ ನೋಡಿ..ಸೆನ್ಸ್ ಲೆಸ್ ಗೇಮ್, ಇದೇನೂ ಕಿಸ್ ಶೋನಾ? ಇದು 11 ಗಂಟೆ ಬಳಿಕ ನೋಡುವ ಶೋ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಫ್ಯಾಮಿಲಿ ಕುಳಿತುಕೊಂಡು ನೋಡುವ ಶೋಗಳಲ್ಲಿ ಈ ರೀತಿ ಟಾಸ್ಕ್ ಮಾಡಿಸೋದು ಎಷ್ಟು ಸರಿ ಅಂತಾ ನೆಟ್ಟಿಗರು ಕೇಳುತ್ತಿದ್ದಾರೆ.