ಬೆಳಗಾವಿ:- ಕರ್ನಾಟಕದಲ್ಲೇ ಇದ್ದು ಕನ್ನಡ ಭಾಷೆಯನ್ನು ಅಲ್ಲಗಳೆಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಂತೆ ಬೆಳಗಾವಿಯ ವೇಗಾ ಹೆಲ್ಮೆಟ್ ಕಂಪನಿ ತೋರಿರುವ ಉದ್ಧಟತನ ಕನ್ನಡಿಗರನ್ನು ಕೆರಳಿಸಿದೆ.
ಕಾರವಾರ: ಎಕ್ಸಿಸ್ ಬ್ಯಾಂಕ್ ನಲ್ಲಿ ಬೆಂಕಿ ಅವಘಡ- ಯಂತ್ರೋಪಕರಣಗಳು ಬೆಂಕಿಗಾಹುತಿ!
ಎಸ್, ವೇಗಾ ಹೆಲ್ಮೆಟ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇಂಗ್ಲಿಷ್, ಹಿಂದಿ, ಮರಾಠಿ ಭಾಷೆ ಕಡ್ಡಾಯವಾಗಿ ಬರ್ಬೇಕಂತೆ. ಕಂಪನಿಯ ಇನ್ಟಾಗ್ರಾಂ ಅಕೌಂಟ್ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ ಕನ್ನಡ ಭಾಷೆ ಬಿಟ್ಟು ಇಂಗ್ಲಿಷ್, ಹಿಂದಿ, ಮರಾಠಿ ಮೂರು ಭಾಷೆ ಬರಬೇಕೆಂದು ಉದ್ಧಟತನ ತೋರಲಾಗಿತ್ತು.
ಕನ್ನಡದ ನೆಲದಲ್ಲಿ ಇದ್ದುಕೊಂಡು ಕನ್ನಡ ಭಾಷೆ ಗೆ ವೇಗಾ ಹೆಲ್ಮೆಟ್ ಕಂಪನಿ ಅವಮಾನಿಸಿತ್ತು. ಕಂಪನಿಯ ಕನ್ನಡ ವಿರೋಧಿ ನೀತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರ ಹಾಕಿದರು. ಕನ್ನಡಿಗರ ಬೆನ್ನಿಗೆ ಚೂರಿ ಹಾಕ್ತಿರೋ ಕಂಪನಿಗೆ ಕನ್ನಡ ಸಂಘಟನೆಗಳು ಬುದ್ಧಿ ಕಲಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಕನ್ನಡಿಗರಿಗೆ ವೇಗಾ ಹೆಲ್ಮೆಟ್ ಕಂಪನಿ ಆಡಳಿತ ಮಂಡಳಿ ಕ್ಷಮೆ ಕೋರಿದೆ.
ಇದು ಕಂಪನಿಗೆ ಹೊಸದಾಗಿ ಸೇರ್ಪಡೆಯಾದ ಕ್ಲರ್ಕ್ ಸಿಬ್ಬಂದಿಯಿಂದ ಆದ ತಪ್ಪು. ಕನ್ನಡ ಭಾಷೆ, ಸಂಸ್ಕೃತಿಗೆ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಮ್ಮ ತಪ್ಪು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಲು ಮನವಿ ಮಾಡುತ್ತೇವೆ ಅಂತಾ ವೇಗಾ ಕಂಪನಿಯ ಎಚ್.ಆರ್ ಬಹಿರಂಗ ಪತ್ರ ದ ಮೂಲಕ ಕ್ಷಮೆ ಯಾಚಿಸಿದ್ದಾರೆ.