ತಮ್ಮ ಮಧುರ ಕಂಠದಿಂದ ಕನ್ನಡಿಗರ ಮನ ಗೆದಿದ್ದ ಕನ್ನಡ ಕೋಗಿಲೆ ಸೀಸನ್ 1 ಮತ್ತು 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದವರು ಗಾಯಕಿ ಅಖಿಲಾ ಪಜಿಮಣ್ಣು. ಅಖಿಲಾ ಇದೀಗ ತಮ್ಮ ದಾಂಪತ್ಯ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಗಾಯಕಿ ಅಖಿಲಾ ಪಜಿಮಣ್ಣು ಮೂರು ವರ್ಷಗಳ ಹಿಂದೆ ಧನಂಜಯ್ ಶರ್ಮಾ ಅವರನ್ನು ವರಿಸಿದ್ದರು. ಇದೀಗ ಈ ಜೋಡಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಜೂನ್ 12 ರಂದು ಪುತ್ತೂರು ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿವಾಹದ ನಂತರವೂ ಪತಿಯೊಂದಿಗೆ ಅಖಿಲಾ ಅಮೆರಿಕಗೆ ತೆರಳಿದ್ದರು. ಅಮೆರಿಕದಲ್ಲಿ ಇದ್ದರೂ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದ ಫುಲ್ ಆಕ್ಟಿವ್ ಆಗಿದ್ದರು. ಗಂಡನ ಜೊತೆಗಿರುವ ಫೋಟೋಸ್ ಶೇರ್ ಮಾಡುತ್ತಿದ್ದರು. ಆದರೆ ಈಗ ಫೋಟೋಗಳನ್ನು ಡಿಲೇಟ್ ಮಾಡಿ ಡಿವೋರ್ಸ್ಗೆ ಮುಂದಾಗಿದ್ದಾರಂತೆ.
ಪರಸ್ಪರ ಒಪ್ಪಂದ ಮೂಲಕ ಅಖಿಲಾ ಹಾಗೂ ಧನಂಜಯ್ ಡಿವೋರ್ಸ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಇನ್ನು ಅಖಿಲಾ ಅವರ ಪತಿ ಧನಂಜಯ್ ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಆ ಬಳಿಕ ಮಾಸ್ಟರ್ ಡಿಗ್ರಿ ಮಾಡುವುದಕ್ಕೆ ಅಮೆರಿಕಗೆ ತೆರಳಿದ್ದರು. ಅಲ್ಲಿಯೇ ಉದ್ಯೋಗಕ್ಕೂ ಸೇರಿಕೊಂಡಿದ್ದರು. ಹೀಗಾಗಿ ವಿವಾಹದ ಬಳಿಕ ಅಖಿಲಾ ಕೂಡ ಅಮೆರಿಕಗೆ ತೆರಳಿದ್ದರು.