ಕಿರುತೆರೆ ಲೋಕದಲ್ಲಿ ತಮ್ಮ ನಟನೆಯ ಮೂಲಕ ಮನೆ ಮಾತನಾಗಿರುವ ನಟಿ ನಿಶಾ ರವಿಕೃಷ್ಣನ್ ಹೊಸ ಮನೆ ಕಟ್ಟಿಸಿದ್ದಾರೆ. ತಾವು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಿಂದ ಸ್ವತಃ ಸೂರು ನಿರ್ಮಿಸಿ, ಅದರ ಗೃಹಪ್ರವೇಶವನ್ನು ಅದ್ಧೂರಿಯಾಗಿ ಮಾಡಿದ್ದಾರೆ.
View this post on Instagram
ಸರ್ವ ಮಂಗಲ ಮಾಂಗಲ್ಯೆ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಿಶಾ, ಆ ಬಳಿಕ ಗಟ್ಟಿಮೇಳ ಧಾರವಾಹಿ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ರೌಡಿಬೇಬಿ ಅಮೂಲ್ಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದರು. ಸದ್ಯ ಅವರು ಅಣ್ಣಯ್ಯ ಸೀರಿಯಲ್‌ನಲ್ಲಿ ಡಾಕ್ಟರ್ ಪಾರ್ವತಿ ಪಾತ್ರದಲ್ಲಿ ನಟಿಸಿದ್ದರು.
ಕನ್ನಡ ಮಾತ್ರವಲ್ಲ ತೆಲುಗು ಸೀರಿಯಲ್‌ನಲ್ಲಿ ನಿಶಾ ರವಿಕೃಷ್ಣನ್ ಅಭಿನಯಿಸುತ್ತಿದ್ದಾರೆ. ಅಮ್ಮಾಯಿಗಾರು ಎಂಬ ತೆಲುಗು ಧಾರಾವಾಹಿದಲ್ಲಿ ನಟಿಸಿದ್ದಾರೆ. ಅಂಶು ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರೀಗೂ ಹೆಜ್ಜೆ ಇಟ್ಟಿರುವ ನಿಶಾ, ಸದ್ಯ ಹೊಸ ಮನೆಯ ಗೃಹ ಪ್ರವೇಶದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
View this post on Instagram