ಕನ್ನಡಿಗರನ್ನು ಕೆಣಕಿದ್ದ ಸೋನು ನಿಗಮ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ. ಬ್ಯಾನ್ ಆಗುತ್ತಿದ್ದಂತೆ ಜ್ಞಾನೋದಯವಾದ ಗಾಯಕ ನನ್ನನ್ನು ಕ್ಷಮಿಸಿ ಕರ್ನಾಟಕ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಸೋನು ನಿಗಮ್ಗೆ ಕನ್ನಡ ಗಿಣಿರಾಮ ಸೀರಿಯಲ್ ನಟಿ ಸಪೋರ್ಟ್ ಕೊಟ್ಟಿದ್ದಾರೆ.
ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿರುವ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದ್ದು ಎಂದು ಸೋನು ನಿಗಮ್ ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ಗೆ ಗಿಣಿರಾಮ ಸೀರಿಯಲ್ ನಾಯಕ ನಯನಾ, ಲವ್ ಯೂ, ನಿಮ್ಮನ್ನು ಬ್ಯಾನ್ ಮಾಡಿದರೆ ಕನ್ನಡ ಇಂಡಸ್ಟ್ರೀಗೆ ನಷ್ಟ ಎಂದಿದ್ದಾರೆ. ನಯನಾ ಪೋಸ್ಟ್ಗೆ ನೆಟ್ಟಿಗರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ಒಳ್ಳೆಯ ಸಿಂಗರ್ ಇದ್ದಾರೆ. ನೋಡ್ಕೊಂಡು ಸಪೋರ್ಟ್ ಮಾಡಿ, ಭಾಷೆ, ರಾಜ್ಯ ಧರ್ಮಕ್ಕಿಂತ ಯಾವ ವ್ಯಕ್ತಿ ದೊಡ್ಡವನಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕನ್ನಡ ಹಾಡು ಎಂದಿದಕ್ಕೆ ಸೋನು ನಿಗಮ್ ಪಹಲ್ಗಾಮ್ ದಾಳಿ ಆಗಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಅವರು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಇಲ್ಲ ಕ್ಷಮೆ ಕೇಳಬೇಕು ಎಂಬ ಕೂಗು ಕೇಳಿ ಬಂದಿತ್ತು. ಬ್ಯಾನ್ ಆಗುತ್ತಿದ್ದಂತೆ ಸೋನು ನಿಗಮ್ ಕ್ಷಮೆಯಾಚಿಸಿದ್ದಾರೆ.