ಹುಬ್ಬಳ್ಳಿ: ಧಾರವಾಡದ ಪ್ರತಿಷ್ಠಿತ ಐತಿಹಾಸಿಕ ಹಿನ್ನೆಲೆಯುಳ್ಳ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಪ್ರಚಾರ ಬಿರುಸುಗೊಂಡಿದೆ. ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಾ. ಶರಣ್ಣಪ್ಪ ಎಂ. ಕೋಟಗಿ ತಂಡಕ್ಕೆ ತಮ್ಮ ಹಾಗೂ ಬೆಂಬಲಿಗರ ರ ಬೆಂಬಲ ಇದೆ ಎಂದು ಕನ್ನಡ ಪರ ಹೋರಾಟಗಾರ ರಾಜು ಅನಂತ ಸಾ ನಾಯಕವಾಡಿ ತಿಳಿಸಿದ್ದಾರೆ.
ಉತ್ತಮ ಮತ್ತು ಬಲಿಷ್ಠ ನಾಯಕತ್ವದ ಮೂಲಕ ಸಂಘದಲ್ಲಿ ಬದಲಾವಣೆಗೆ ಸಮಯ ಈಗ ಬಂದಿದ್ದು, ಹಿರಿಯ ವಕೀಲ ಮೋಹನ್ ಲಿಂಬಿಕಾಯಿ ಹಾಗೂ ಶರಣಪ್ಪ ಕೊಟಗಿ ಮುಂದಾಳತ್ವದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ಕಣಕ್ಕೆ ಇಳಿದಿದ್ದು ಸ್ವಾಗತಾರ್ಹ ವಿಚಾರ ಎಂದಿದ್ದಾರೆ.
ತಾಳಿ ಕಟ್ಟುವ ವೇಳೆ… ಬಂತು ಫೋನ್ ಕಾಲ್.. ಮದುವೆ ನಿಲ್ಲಿಸಿ ಪ್ರಿಯಕರನ ಜತೆ ವಧು ಎಸ್ಕೇಪ್ ..!
ಸ್ವಾತಂತ್ರ್ಯ ಹೋರಾಟಗಾರರಾದ ಪಾಟೀಲ್ ಪುಟ್ಟಪ್ಪನವರ ಸ್ವಾಭಿಮಾನದ ಸಂಕೇತವಾಗಿರುವ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಒಳ್ಳೆಯ ನಿಶ್ವಾಸಾರ್ಹ ಹೋರಾಟಗಾರರ ಅಗತ್ಯ ಇಂದು ಇದೆ. ಈ ನಿಟ್ಟಿನಲ್ಲಿ ಶರಣಪ್ಪ ಕೊಟಗಿ ಹಾಗೂ ಮೋಹನ ಲಿಂಬಿಕಾಯಿ ಸೇರಿ ಹಲವರು ಪದಾಧಿಕಾರಿಗಳು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇಂದು
ನಾವೆಲ್ಲರೂ ಸೇರಿ ಸಂಘದ ಪ್ರಗತಿಪಥದ ಭವಿಷ್ಯ ನಿರ್ಮಿಸೋಣ, ಇದು ನಮ್ಮ ಒಗ್ಗಟ್ಟಿನ ಧ್ಯೇಯ ಆಗಬೇಕು ಎಂದಿದ್ದಾರೆ.