Close Menu
Ain Live News
    Facebook X (Twitter) Instagram YouTube
    Monday, July 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೃಷಿ ಭವಿಷ್ಯಕ್ಕಾಗಿ ಕರ್ನಾಟಕದ ದೃಷ್ಟಿಕೋನ : ಐಸಿಎಆರ್ ಆಡಳಿತ ಮಂಡಳಿ ಸಭೆಯಲ್ಲಿ ಚಲುವರಾಯಸ್ವಾಮಿ

    By Author AINJuly 7, 2025
    Share
    Facebook Twitter LinkedIn Pinterest Email
    Demo

    ದೆಹಲಿ :  ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ದೆಹಲಿಯಲ್ಲಿ ನಡೆದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯದ ಕೃಷಿ ವಲಯವನ್ನು ಬಲಪಡಿಸುವ ದೂರದೃಷ್ಟಿಯ ಯೋಜನೆಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕರ್ನಾಟಕವು ಕೃಷಿ ನಾವೀನ್ಯತೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು, ರೈತರ ಕಲ್ಯಾಣಕ್ಕಾಗಿ ನವೀನ ಯೋಜನೆಗಳನ್ನು ರೂಪಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ. ರೈತ ಕೇಂದ್ರಿತ, ಆಧುನಿಕ ಮತ್ತು ಹವಾಮಾನ-ತಡೆಗಟ್ಟುವ ಕೃಷಿ ವ್ಯವಸ್ಥೆಯನ್ನು ರೂಪಿಸಲು ಐಸಿಎಆರ್‌ ಸಹಕಾರ ಬಹುಮುಖ್ಯ” ಎಂದರು.

     

    ಸಬೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಗಿ, ರಬಿ,ಜೋಳ ಮತ್ತು ತೊಗರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಇ-ನಾಮ್ ಮೂಲಕ ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಮಾರುಕಟ್ಟೆ ಸಂಪರ್ಕ, ರಾಗಿ, ಒಣ ಬೇಸಾಯ, ತೋಟಗಾರಿಕೆ, ಔಷಧೀಯ ಸಸ್ಯಗಳು ಮತ್ತು ಆಹಾರ ಸಂಸ್ಕರಣೆಗೆ ಐಸಿಎಆರ್-ರಾಜ್ಯ ಸಹಭಾಗಿತ್ವದ ವಿಶೇಷ ಸಂಶೋಧನಾ ಸಂಸ್ಥೆಗಳ ಸ್ಥಾಪನೆಯನ್ನು ಪ್ರಸ್ತಾಪಿಸಿದರು.

    ಕೃಷಿ ವಿಶ್ವವಿದ್ಯಾಲಯಗಳಿಗೆ ಖಾಸಗಿ ಧನಸಹಾಯದ ಮೇಲೆ ಜಿಎಸ್‌ಟಿ ವಿನಾಯಿತಿ, ಕೃಷಿ ಸ್ಟಾರ್ಟ್‌ಅಪ್‌ಗಳಿಗೆ ಬೀಜ ನಿಧಿ, ಇನ್‌ಕ್ಯುಬೇಶನ್ ಮತ್ತು ಉದ್ಯಮಶೀಲತೆ ಕೇಂದ್ರಗಳ ಸ್ಥಾಪನೆ, ಹಾಸ್ಟೆಲ್, ಪ್ರಯೋಗಾಲಯಗಳಿಗೆ ಹೆಚ್ಚಿನ ಅನುದಾನ, ಡಿಜಿಟಲ್ ಕ್ಲಾಸ್‌ರೂಮ್‌ಗಳು, ಎಆರ್/ವಿಆರ್ ಉಪಕರಣಗಳು ಮತ್ತು ಐಒಟಿ-ಸಕ್ರಿಯ ಸ್ಮಾರ್ಟ್ ಲ್ಯಾಬ್‌ಗಳ ಮೂಲಕ ಆಧುನಿಕ ಸಂಶೋಧನೆ, ಹಾಗೂ ಸುಸ್ಥಿರ ಕೃಷಿ ಪದ್ಧತಿಗಳಿಗೆ ಕೇಂದ್ರದ ಬೆಂಬಲವನ್ನು ಕೋರಿದರು.

     

    ಇದರ ಜೊತೆಗೆ, ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ವಿಷಯ ತಜ್ಞರ (ಎಸ್‌ಎಂಎಸ್) ಹುದ್ದೆಗಳನ್ನು ಸಹಾಯಕ ಪ್ರಾಧ್ಯಾಪಕರಿಗೆ ಸಮಾನಗೊಳಿಸುವ ಪ್ರಸ್ತಾವವನ್ನು ಮಂಡಿಸಿದರು, ಇದರಿಂದ ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಒತ್ತಡ ಕಡಿಮೆಯಾಗಲಿದೆ ಎಂದರು..

     

    ಕರ್ನಾಟಕದ ಮಣ್ಣಿನ ಆರೋಗ್ಯಕ್ಕಾಗಿ ಐಸಿಎಆರ್ ಟಾಸ್ಕ್ ಫೋರ್ಸ್ ಮತ್ತು ನಿಧಿ, ಸಾವಯವ ಹಾಗೂ ಸಿರಿಧಾನ್ಯ ಅಭಿಯಾನಕ್ಕೆ ರಾಷ್ಟ್ರೀಯ ಮನ್ನಣೆ, ಕೃಷಿ ಭಾಗ್ಯ ಮತ್ತು ರೈತ ಸಿರಿ ಯೋಜನೆಗಳೊಂದಿಗೆ ಐಸಿಎಆರ್ ಯೋಜನೆಗಳ ಸಮನ್ವಯ, ಮತ್ತು ಪಿಎಂಎಫ್‌ಎಂಇ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಕ್ಲಸ್ಟರ್‌ಗೆ ಕೇಂದ್ರದ ನೆರವನ್ನು ಸಚಿವರು ಕೋರಿದರು.

     

    ಇದೇ ವೇಳೆ, ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್‌ ಚೌವ್ಹಾಣ್‌ ಅವರನ್ನು ಕರ್ನಾಟಕದ ಸಾಂಪ್ರದಾಯಿಕ ಮೈಸೂರು ಪಾಕ್‌, ರೇಶ್ಮೆ ಶಾಲು, ಸೀರೆ ಮತ್ತು ನೇಗಿಲುಗಳನ್ನು ನೀಡಿ ಗೌರವಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಕಳಪೆ ಹೆಲ್ಮೆಟ್’ಗಳಿಗೆ ಕೇಂದ್ರದ ಬ್ರೇಕ್: ಕಡ್ಡಾಯ BIS ಪ್ರಮಾಣಪತ್ರವಿಲ್ಲದ ಮಾರಾಟಕ್ಕೂ ತಡೆ!

    July 7, 2025

    ಕೂದಲಿನ ಕ್ಲಿಪ್ ಹಾಗೂ ಚಾಕುವಿನಿಂದ ಹೆರಿಗೆ: ತಾಯಿ-ಮಗುವನ್ನು ರಕ್ಷಿಸಿದ ಸೇನಾ ವೈದ್ಯ!

    July 7, 2025

    ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ ವಿಚಾರ: ವದಂತಿಗೆ ತೆರೆ ಎಳೆದ CM ಕಚೇರಿ!

    July 6, 2025

    ಹೃದಯಾಘಾತಕ್ಕೆ ಖ್ಯಾತ ಹಾಲಿವುಡ್ ನಟ ಸಾವು!

    July 5, 2025

    ಬ್ಯಾಂಕ್ ವಂಚನೆ ಪ್ರಕರಣ: ಅಮೆರಿಕದಲ್ಲಿ ನೀರವ್ ಮೋದಿ ಸಹೋದರ ನಿಹಾಲ್ ಮೋದಿ ಅರೆಸ್ಟ್..!

    July 5, 2025

    ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ 5 ಬಸ್’ಗಳ ನಡುವೆ ಸರಣಿ ಅಪಘಾತ: 36 ಮಂದಿಗೆ ಗಂಭೀರ ಗಾಯ!

    July 5, 2025

    ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಮೇಲೆ ಗುಂಡಿನ ದಾಳಿ..! ಸ್ಥಳದಲ್ಲೇ ಸಾವು

    July 5, 2025

    ಭೀಕರ ರಸ್ತೆ ಅಪಘಾತ: ಮದುವೆ ದಿಬ್ಬಣಕ್ಕೆ ಹೊರಟಿದ್ದ 8 ಮಂದಿ ಸ್ಥಳದಲ್ಲೇ ಸಾವು!

    July 5, 2025

    ರೈತನಾಗಿ ಹೊಲ ಉಳುಮೆ ಮಾಡಿದ ಸಿಎಂ..! VIDEO ವೈರಲ್

    July 5, 2025

    ಸ್ಯಾನಿಟರಿ ಪ್ಯಾಡ್ ಮೇಲೆ ರಾಹುಲ್ ಗಾಂಧಿ ಫೋಟೋ: ವಿವಾದಕ್ಕೀಡಾದ ಕಾಂಗ್ರೆಸ್ ನಾಯಕನ ಚಿತ್ರ!

    July 5, 2025

    TVK ಪಕ್ಷದ ಸಿಎಂ ಅಭ್ಯರ್ಥಿ ನಾನೇ ಎಂದ ದಳಪತಿ..ಬಿಜೆಪಿ ಜೊತೆ ಮೈತ್ರಿ ಇಲ್ಲ..ವಿಜಯ್‌ ಏಕ್‌ ಮಾರ್ ದೋ ತುಕ್ಡ್!‌

    July 4, 2025

    ಶಿಕ್ಷಣದ ಹೆಸರಿನಲ್ಲಿ Instagram ನಕಲಿ ಖಾತೆ ತೆರೆದು ವಂಚನೆ: 18 ಲಕ್ಷ ಕಳೆದುಕೊಂಡ MBA ವಿದ್ಯಾರ್ಥಿನಿ..!

    July 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.