ಕನ್ನಡ ಕಿಸ್ ಕುವರಿ ಶ್ರೀಲೀಲಾ ಈಗ ಬಹುಬೇಡಿಕೆ ನಟಿಯಾಗಿ ಬೆಳೆಯುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಜಿಗಿದ ಈ ನಟಿ ಈಗ ಬಾಲಿವುಡ್ ಗೆ ಹಾರಿದ್ದಾರೆ. ಬಿಟೌನ್ ಗೆ ಮೊದಲ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಡೇಟಿಂಗ್ ಮ್ಯಾಟರ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಬಾಲಿವುಡ್ ಸುರಸುಂದರ ಕಾರ್ತಿಕ್ ಆರ್ಯನ್ ಜೊತೆ ಡಾಕ್ಟರಮ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ನಡುವೆಯೇ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು ನೀನೇ ನನ್ನ ಜೀವ ಅಂತಾ ಕಾರ್ತಿಕ್ ಆರ್ಯನ್ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದಾರೆ.
ಕಾರ್ತಿಕ್ ಆರ್ಯನ್ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರಾ ಅನ್ನೋ ಅನುಮಾನಕ್ಕೆ ಇದು ತುಪ್ಪ ಸುರಿದಂತಿದೆ. ಈ ಫೋಟೋ ಬೆನ್ನತ್ತಿದಾಗ ಅದು ಸಿನಿಮಾದ್ದೂ ಅನ್ನೋದು ಬಹಿರಂಗವಾಗಿದೆ. ಪ್ರಕೃತಿ ಮಧ್ಯೆ ಕುಳಿತು ಶ್ರೀಲೀಲಾರನ್ನು ಕಾರ್ತಿಕ್ ನೋಡ್ತಿರೋ ಫೋಟೋ ಹಂಚಿಕೊಂಡು, ಅದಕ್ಕೆ ‘ನೀನೇ ನನ್ನ ಜೀವನ’ ಎಂದು ಅಡಿಬರಹ ನೀಡಿದ್ದಾರೆ. ಇದು ಆಶಿಕಿ-3 ಸಿನಿಮಾದ ಫೋಟೋ.
ಪಶ್ಚಿಮ ಬಂಗಾಳದಲ್ಲಿ ಆಶಿಕಿ-3 ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿದ್ದಾರೆ. ಇಬ್ಬರೂ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರಿಬ್ಬರ ಕೆಮಿಸ್ಟ್ರೀ ನೋಡಿ ಫ್ಯಾನ್ಸ್ ಮೇಡ್ ಫಾರ್ ಈಚ್ ಅದರ್ ಎನ್ನುತ್ತಿದ್ದಾರೆ.
ಕಾರ್ತಿಕ್ ಬರ್ತಡೇ ಪಾರ್ಟಿಯಲ್ಲಿ ಲೀಲಾ ರಂಗು
ಇತ್ತೀಚೆಗೆ ಕಾರ್ತಿಕ್ ಆರ್ಯನ್ ಬರ್ತಡೇ ಪಾರ್ಟಿಯನ್ನು ಅವರ ನಿವಾಸದಲ್ಲಿ ಏರ್ಪಡಿಸಲಾಗಿತ್ತು. ಈ ಪಾರ್ಟಿಗೆ ಲೀಲಾ ರಂಗು ತುಂಬಿದ್ದರು. ಈ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿ ಶ್ರೀಲೀಲಾ ಮಸ್ತ್ ಎಂಜಾಯ್ ಮಾಡಿದ್ದರು. ಪಂಜಾಬಿ ಹಾಡುಗಳಿಗೆ ಕುಣಿದು, ಅವರ ಮನೆಯಲ್ಲಿ ಒಬ್ಬರಾಗಿ ಬೆರೆತಿದ್ದರು.