ಕಾರವಾರ:- ನೀರಿನ ಸೆಳೆತಕ್ಕೆ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಜೋಗನ ಹಕ್ಕಲು ಫಾಲ್ಸ್ ನಲ್ಲಿ ಜರುಗಿದೆ. ಶಿರಸಿ ತಾಲೂಕಿನ ಸೋಮನಳ್ಳಿ ಉಂಬಳೆಕೊಪ್ಪದ ಪವನ್(24) ನಾಪತ್ತೆಯಾದ ಯುವಕ.
ಕಳೆದ 3 ದಿನದಿಂದ ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಜೂನ್ 23 ರಂದೇ ಹಳ್ಳ ದಾಟುವಾಗ ಯುವಕ ಕೊಚ್ಚಿ ಹೋಗಿದ್ದಾನೆ.
ಯುವಕನಿಗಾಗಿ NDRF ತಂಡದಿಂದ ಶೋಧ ಕಾರ್ಯ ನಡೆದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ.