ಕಾರವಾರ:- ಪಹಲ್ಗಾಮ್ ದಾಳಿ ಖಂಡಿಸಿ ಕಾರವಾರದಲ್ಲಿ ನಾಳೆ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರ ಬಂದ್ ಗೆ ಕರೆ ನೀಡಿತ್ತು. ಆದರೆ, ಇದೀಗ ನಾಳೆ ಬಂದ್ ಇರುವುದಿಲ್ಲ ಎಂದು ಎಸ್.ಪಿ ಎಂ.ನಾರಾಯಣ್ ತಿಳಿಸಿದ್ದಾರೆ.
ಕಾರವಾರದಲ್ಲಿ ನಾಳೆ ಬಂದ್ ಇರುವುದಿಲ್ಲ. ಸಂಘಟನೆಗಳು ಬಂದ್ಗೆ ಕರೆಕೊಟ್ಟಿದ್ದವು. ಸಂಘಟಕರ ಜೊತೆ ಮಾತನಾಡಲಾಗಿದ್ದು, ಬಂದ್ ಇರುವುದಿಲ್ಲ. ಬದಲಾಗಿ ಮೆರವಣಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಂದ್ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.