ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ಬೆನಕ ಗೋಲ್ಡ್ ಪ್ರೈ.ಲಿಗೆ ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ ರೀಷ್ಮಾ ನಾಣಯ್ಯ ನೂತನ ಬ್ಯ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್‌ದಲ್ಲಿ ನಡೆದ ಸಮಾರಂಭದಲ್ಲಿ ರೀಷ್ಮಾನಾಣಯ್ಯ ಅವರನ್ನು ಅಧಿಕೃತವಾಗಿ ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಭರತ್‌ಕುಮಾರ್ ಸಂಸ್ಥೆಯು ಐದು ವರ್ಷಗಳ ಹಿಂದೆ ಪ್ರಾರಂಭಗೊಂಡು, ಪ್ರಸ್ತುತ 35 ಶಾಖೆಗಳನ್ನು ಹೊಂದಿದ್ದು 300ಕ್ಕೂ ಹೆಚ್ಚು ಜನರಿಗೆ ಉದ್ಯೋವಕಾಶ ಕಲ್ಪಸಿದೆ. ಬೇಡಿಕೆಯ ಕಲಾವಿದೆ ರೀಷ್ಮಾನಾಣಯ್ಯ ನಮ್ಮ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕಳಸ ಇಟ್ಟಂತೆ ಆಗಿದೆ. ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡುವ ಯೋಜನೆ, ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ್ದು ಏಕೈಕ ಸಂಸ್ಥೆ ಅದು ಬೆನಕ ಗೋಲ್ಡ್ ಎಂದು ಹೇಳಲು ಸಂತಸವಾಗುತ್ತದೆ. ಬೇರೆ ಕಡೆ ಚಿನ್ನ ಮಾರಾಟ ಮಾಡಿರೆಂದು ಹೇಳುತ್ತಾರೆ. ನಾವು ಆ ರೀತಿ ಹೇಳದೆ, ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ’ಸೆಲ್ ಅಂಡ್ ಸೇವ್’ ಯೋಜನೆ ಅನಾವರಣಗೊಳಿಸಿದ್ದೇವೆ.
ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಬದಲಿಗೆ ಅದನ್ನು ಬೆನಕಗೆ ನೀಡಿದರೆ ಮಾಸಿಕ ಲಾಭಾಂಶವನ್ನು ಗಳಿಸುವ ’ರೆಂಟ್ ಫಾರ್ ಗೋಲ್ಡ್’ ಯೋಜನೆ ಇದೆ. ಗ್ರಾಹಕರ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಅವರ ಮನೆಯ ಬಾಗಿಲಿಗೆ ಹೋಗಿ ಸೇವೆ ನೀಡುವುದೇ ’ಡೋರ್ ಸ್ಟೆಪ್ ಸರ್ವಿಸ್’ ಅಂದೇ ಪ್ರಾರಂಭಿಸಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿನ್ನಾಭರಣ ಮಾರಾಟ ಅಥವಾ ಗಿರಿವಿಯಿಟ್ಟ ಚಿನ್ನವನ್ನು ಬಿಡುಗಡೆ ಮಾಡಲು ಹುಡುಕುತ್ತಿರುವ ವ್ಯಕ್ತಿಗಳನ್ನು ರೆಫರ್ ಮಾಡಿದರೆ, ಆಕರ್ಷಕ ಬಹುಮಾನ ನೀಡುವ ’ರೆಫರ್ ಅಂಡ್ ಅರ್ನ್’ ಯೋಜನೆ. ಗ್ರಾಹಕರಿಗೆ ಪಾರದರ್ಶಕವಾಗಿ ಸೇವೆ ನೀಡುವುದೇ ’ಬೆನಕ ಗೋಲ್ಡ್ ಸಂಸ್ಥೆ’ಯ ಗುರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವೆಬ್‌ಸೈಟ್, ಆಪ್‌ನ್ನು ರೀಷ್ಮಾನಾಣಯ್ಯ ಲೋಕಾರ್ಪಣೆ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಹಾಗೂ ಉಚ್ಚ ನ್ಯಾಯಲಯದ ಹಿರಿಯ ವಕೀಲ ವಿವೇಕ್‌ಸುಬ್ಬರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜನ್.ಎಂ.ಕೆ ಮತ್ತು ಬಾಲನಟಿ ಪ್ರತಿಶೆಟ್ಟಿ ಉಪಸ್ತಿತರಿದ್ದರು.