ಬೆಂಗಳೂರು:- ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಧೈರ್ಯಕ್ಕೆ ಖರ್ಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು| ಭೀಕರ ರಣಮಳೆಗೆ ಮುಳುಗಿದ ಫೇಮಸ್ ‘ಬೆಳ್ಳುಳ್ಳಿ ಕಬಾಬ್’ ಹೋಟೆಲ್!
ಈ ಸಂಬಂಧ ಮಾತನಾಡಿದ ಅವರು, ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಚುಚ್ಚುಪುಟ್ಟ ಯುದ್ಧ ಅಂತ ಕರೆಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಧೈರ್ಯಕ್ಕೆ ಅಪಮಾನ ಮಾಡಿದ್ದಾರೆ ಎಂದರು.
ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ “ಹೆಚ್ಚು ಕಡಿಮೆ ಚುಟ್ಪುಟ್ಟ ಯುದ್ಧಗಳು ನಡೆದಿವೆ. ಅಥವಾ ಪಾಕಿಸ್ತಾನದ ವಿರುದ್ಧ ನಾವು ಘರ್ಷಣೆ ಮಾಡುತ್ತಿದ್ದೇವೆ. ಪಾಕಿಸ್ತಾನದ ಕೆಲಸ ಯಾವಾಗಲೂ ಭಾರತದ ಮೇಲೆ ಗೂಬೆ ಕೂಡಿಸುವುದು” ಎಂದು ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿರುವ ವಿಡಿಯೋವನ್ನು ಬಿವೈ ವಿಜಯೇಂದ್ರ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ವಾಗ್ದಾಳಿ ಮಾಡಿದ್ದಾರೆ.
ಕಾರ್ಗಿಲ್ ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನದ ವಿರುದ್ಧ ನಡೆದ ಈ ಕಾರ್ಯಾಚರಣೆಯು ಅತ್ಯಂತ ಪ್ರಬಲ ಮತ್ತು ಅತ್ಯಂತ ಲೆಕ್ಕಾಚಾರದ ಮಿಲಿಟರಿ ಕಾರ್ಯಾಚರಣೆಯಾಗಿದೆ” ಎಂದಿದ್ದಾರೆ.