ರೀಲ್ಸ್ ಹುಚ್ಚಿಗೆ ಬಿದ್ದು ಮಚ್ಚು ಹಿಡಿದು ಜೈಲು ಸೇರಿದ್ದ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕನ್ನಡದ ಬಿಗ್ ಬಾಸ್ ಹೋಗಿ ಬಂದ ಬಹುತೇಕ ಮಂದಿ ಇಂತಹ ಕಂಟ್ರವರ್ಸಿಗಳಿಂದಲೇ ಸುದ್ದಿಯಾಗುತ್ತಾರೆ. ಅದರಲ್ಲಿಯೂ ʼಡಿ ಪಡೆʼ ಅಂತಾನೇ ವಿನಯ್ ಹಾಗೂ ರಜತ್ ಅವರನ್ನು ಕರೆಯಲಾಗುತ್ತಿದೆ. ಜೈಲಿನಿಂದ ಹೊರಬರುವ ವೇಳೆ ರಜತ್, ವಿನಯ್ ಸೇಬು ತಿನ್ನುತ್ತಾ ಬಂದಿದ್ದನ್ನು ಗಮನಿಸಿದ ಹಲವರು ʼಡಿ ಗ್ಯಾಂಗ್ʼ ಎಂದು ಕರೆದಿದ್ದರು. ಪರಪ್ಪನ ಅಗ್ರಹಾರದಿಂದ ಹೊರ ಬರುತ್ತಿದ್ದಂತೆ ವಿಡಿಯೋ ಮಾಡಿ ವಿನಯ್ ಕ್ಷಮೆಯಾಚಿಸಿದ್ದರು. ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ತಮಗೆ ಸಿಕ್ಕಿರುವ ಡಿ ಗ್ಯಾಂಗ್ ಪಟ್ಟಕ್ಕೂ ವಿನಯ್ ಗೌಡ ಕ್ಲಾರಿಟಿ ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ವಿನಯ್ ಗೌಡ, “ಇಲ್ಲಿ ʻಡಿ ಗ್ಯಾಂಗ್ʼ ವಿಷ್ಯನೇ ಬರೋದಿಲ್ಲ. ಇದು ನನ್ನ ವೃತ್ತಿ, ಬೆಳಗ್ಗೆ ಎದ್ದರೆ ನಾನು ಕೆಲಸಕ್ಕೆ ಹೋಗ್ತೀನಿ. ಯಾವ ಗ್ಯಾಂಗ್ ಕೆಲಸಕ್ಕೂ ನಾನು ಹೋಗೋದಿಲ್ಲ. ನಾನು ನನ್ನ ಕುಟುಂಬಕ್ಕಾಗಿ ದುಡಿತಿದ್ದೀನಿ, ಗ್ಯಾಂಗ್ಗೋಸ್ಕರ ಅಲ್ಲ, ನನ್ನ ಹೆಂಡತಿ ಮತ್ತು ಮಗನಿಗೋಸ್ಕರ. ಅದು ಗ್ಯಾಂಗ್ ಅಂತ ಮಾಡೋದು ತಪ್ಪಾಗುತ್ತೆ. “ನಾನು ಒಬ್ಬ ಉದ್ಯೋಗಿ. ಮಿಲನ ಪ್ರಕಾಶ್ ಸರ್ ನಂಗೆ ತುಂಬಾ ಹಳೆಯ ಪರಿಚಯ. ಅವರ ಪ್ರೊಡಕ್ಷನ್ ಹೌಸ್ನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೀನಿ. ಅವರಿಗೆ ನನ್ನ ಆಕ್ಟಿಂಗ್ ಗೊತ್ತು, ನನ್ನ ಸ್ವಭಾವ ಗೊತ್ತು. ಆ ಕಾರಣಕ್ಕೆ ʻಡೆವಿಲ್ʼ ಸಿನಿಮಾಗೆ ಅವರು ವಿಲನ್ ಆಗಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ವಿಲನ್ ಆಗಿರೋದ್ರಿಂದ ಈ ಕೇಸ್ಗೆ ಸಂಬಂಧ ಪಟ್ಟಂಗೆ ಒಂದಷ್ಟು ಕನೆಕ್ಷನ್ಸ್ ಇರುವುದರಿಂದ, ʻಡಿ ಗ್ಯಾಂಗ್ʼ ಅಂತ ಫ್ರೇಮ್ ಮಾಡಿದ್ದಾರೆ. ಈ ಗ್ಯಾಂಗ್ ಇದೆಲ್ಲಾ ಏನು ನಡೆಯುವುದಿಲ್ಲ ಇವಾಗ. ಕಾನೂನು ಎಲ್ಲರಿಗೂ ಒಂದೇ. ನಾನು ಗ್ಯಾಂಗ್ ಮಾಡಿಕೊಂಡು ಹೋಗ್ತೀನಿ ನಾನು ರೌಡಿಸಂ ಮಾಡ್ತೀನಿ ಅಂತಂದರೆ ಇಲ್ಲಿ ಏನೂ ನಡೆಯಲ್ಲ” ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ವಿನಯ್ ಗೌಡ, “ನಮ್ಮ ಇಂಡಸ್ಟ್ರೀಯಲ್ಲಿ, ನನಗೆ ಸಖತ್ ಸಪೋರ್ಟಿವ್ ಆಗಿರೋದು ಸುದೀಪ್ ಸರ್. ಪ್ರತೀ ಬಾರಿಯೂ ನನಗೆ ಒಂದು ಚೂರು ಪ್ರಾಬ್ಲಮ್ ಆದ್ರೂ, ಅಥವಾ ನನಗೆ ಏನಾದರೂ ಪ್ರಶ್ನೆ ಇದ್ದರೂ ನಾನು ಮೊದಲು ಕೇಳುವುದು ಸುದೀಪ್ ಸರ್ಗೆ. ನಾನು ಅವರಿಂದ ಹಲವಾರು ಸಲಹೆಗಳನ್ನು ತೆಗೆದುಕೊಳ್ಳುತ್ತೇನೆ. ʻಡೆವಿಲ್ʼ ಪ್ರಾಜೆಕ್ಟ್ ಬಂದಾಗ ನಾನು ಸುದೀಪ್ ಸರ್ ಜೊತೆ ಮಾತನಾಡಿದಾಗ, ʻತುಂಬಾ ಒಳ್ಳೆಯ ಅವಕಾಶ, ಚೆನ್ನಾಗಿ ಅಭಿನಯ ಮಾಡು. ನಿನ್ನ ಕೆಲಸ ನೀನು ಮಾಡು ಬೇರೆ ಕನೆಕ್ಷನ್ ಬಗ್ಗೆ ಚಿಂತೆ ಮಾಡಬೇಡʼ ಅಂತ ಸಲಹೆ ನೀಡಿದ್ದರು. ಈ ಪ್ರಕರಣದಲ್ಲೂ ನನ್ನ ಫ್ಯಾಮಿಲಿಗೆ ಸುದೀಪ್ ಸರ್ ಸಪೋರ್ಟ್ ಆಗಿ ನಿಂತಿದ್ದಾರೆ. ನಾನು ಮುಂಚೆಯೂ ಹೇಳಿದ್ದೀನಿ, ಸುದೀಪ್ ಸರ್ ನನಗೆ ಅಣ್ಣನಂತೆ, ಗಾಡ್ ಫಾದರ್. ನನ್ನ ಪ್ರತಿ ಹೆಜ್ಜೆಗೂ ನನಗೆ ಸಹಾಯ ಮಾಡೋದು ಸುದೀಪ್ ಸರ್. ಆ ಗ್ಯಾಂಗ್ ಈ ಗ್ಯಾಂಗ್ ಅಂತೇನಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡೆವಿಲ್ & ಬಿಲ್ಲ ರಂಗ ಭಾಷಾಗೂ ವಿನಯ್ ವಿಲನ್
ವಿನಯ್ ಗೌಡ ದರ್ಶನ್ ನಟಿಸುತ್ತಿರುವ ಡೆವಿಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಕಿಚ್ಚನ ಬಿಲ್ಲ ರಂಗ ಭಾಷಾದಲ್ಲಿಯೂ ವಿನಯ್ ಅವಕಾಶ ಗಿಟ್ಟಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿ ವಿನ್ ಗೌಡ ಕಂಟೆಂಸ್ಟ್ ಮಾಡಿದ್ದರು.