ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ 11 ಸೀಸನ್ಗಳನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದ ಏಕಮಾತ್ರ ನಿರೂಪಕ ಕಿಚ್ಚ ಸುದೀಪ್ ಗುಡ್ಬೈ ಹೇಳಿದ್ರು. 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು ಕಿಚ್ಚ ಸುದೀಪ್.
ಕಿಚ್ಚನ ಈ ಮಾತು ಬಿಗ್ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಬಿಗ್ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಮಾಡಿದ್ದು ಯಶಸ್ವಿಯಾಗಿದೆ.
ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?
ಹೌದು ಕಿಚ್ಚ ಸುದೀಪ್ ಅವರೇ ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್ಬಾಸ್ ಟೀಮ್ ಇಂದು ನಡೆದ ಪ್ರೆಸ್ ಮೀಟ್ನಲ್ಲಿ ಹಂಚಿಕೊಂಡಿದೆ.
ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಈ ಬಾರಿಯ ಬಿಗ್ಬಾಸ್ ಸೀಸನ್ 12 ನಿರೂಪಣೆ ಮಾಡಲು ಕಿಚ್ಚ ಸುದೀಪ್ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಬಿಗ್ಬಾಸ್ ಟೀಮ್ ಮಾಹಿತಿ ನೀಡಿದೆ.