ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಲ್ಲ ರಂಗ ಭಾಷಾ ಸಿನಿಮಾ ಅಪ್ ಡೇಟ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಮ್ಯಾಕ್ಸ್ ಬಳಿಕ ಕಿಚ್ಚ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಬಹುದೆಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಏಪ್ರಿಲ್ 16ರಂದು ಕಿಚ್ಚ ಬಿಲ್ಲ ರಂಗ ಭಾಷಾ ಅಂಗಳದಿಂದ ಹೊಸ ಅಪ್ ಡೇಟ್ ಸಿಗಲಿದೆ. ಅದು ಏನೂ ಅನ್ನೋದು ಸರ್ ಪ್ರೈಸ್ ಈ ನಡುವೆ ಸುದೀಪ್ ಬಂಗಾರದ ಅಂಗಡಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಟಿಎ ಶರವಣ ಒಡೆತನ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಜ್ಯುವೆಲರಿ ಶಾಪ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೊಸ ಶಾಖೆ ಆರಂಭಿಸಿದೆ. ಈ ಹೊಸ ಬಂಗಾರದ ಅಂಗಡಿಯನ್ನು ಕಿಚ್ಚ ಸುದೀಪ್ ಉದ್ಘಾಟಿಸಿದ್ದಾರೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಕೂಡ ಉಪಸ್ಥಿತರಿದ್ದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಟಿಎ ಶರವಣ ಅವರಿಗೆ ಶುಭ ಹಾರೈಸಿದ್ದಾರೆ.
ಸಾಯಿ ಗೋಲ್ಡ್ ಪ್ಯಾಲೇಸ್ ಜ್ಯುವೆಲರಿ ಶಾಪ್ ಉದ್ಘಾಟಿಸಿದ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಜ್ಯುವೆಲರಿ ಹಾಕೋಕೆ ಇಷ್ಟ ಇಲ್ಲ ಆದ್ರೆ ಜ್ಯುವೆಲರಿ ಹಾಕೋರನ್ನ ನೋಡೋಕೆ ಇಷ್ಟ ಎಂದು ತಿಳಿಸಿದ್ದಾರೆ.