ಕಿಚ್ಚ ಸುದೀಪ್ ಅಭಿಮಾನಿ ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿಚ್ಚ ಗಾಯಗೊಂಡಿದ್ದೇಗೆ? ಏನಾಯ್ತು ಸುದೀಪ್ ಗೆ ಅಂತಾ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಅಷ್ಟಕ್ಕೂ ಸುದೀಪ್ ಕೈಗೆ ಗಾಯ ಮಾಡಿಕೊಂಡಿದ್ದಾರಾ? ಎಲ್ಲಿ ಇದು ಆಗಿದ್ದು ಅನ್ನೋದು ಅಭಿಮಾನಿಗಳ ಪ್ರಶ್ನೆ.
ಬಿಲ್ಲ ರಂಗ ಬಾಷಾ ಶೂಟಿಂಗ್ ವೇಳೆ ಸುದೀಪ್ ಗಾಯಗೊಂಡಿದ್ದಾರೆ. ಹೈ ಪ್ಯಾಕ್ಡ್ ಆಕ್ಷನ್ ಸೀಕ್ವೆನ್ಸ್ ವೇಳೆ ಕಿಚ್ಚ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವೇಳೆ ಸುದೀಪ್ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
Action episodes joraa? @anupsbhandari sir😁#BRBFirstBlood pic.twitter.com/REQBBwrUyh
— BRBverse (@BRBverse2209) May 25, 2025
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಬಾಷಾ ಸಿನಿಮಾ ಮೂಡಿ ಬರ್ತಿದೆ. ಮ್ಯಾಕ್ಸ್ ಸಕ್ಸಸ್ ಬಳಿಕ ಕಿಚ್ಚ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಇದಾಗಿದ್ದು, 2209 ಎಡಿ ಕಥೆ ಇದಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ‘ವಿಕ್ರಾಂತ್ ರೋಣ’ ಬಳಿಕ ಸುದೀಪ್- ಅನೂಪ್ ಜೋಡಿ ಮತ್ತೊಂದು ಭರ್ಜರಿ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.