ವಿರಾಟ್ ಕೊಹ್ಲಿ ಅಂದ್ರೆ ಕೆಂಡ… ವಿರಾಟ್ ಕೊಹ್ಲಿ ಅಂದ್ರೆ ಬೆಂಕಿ… ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ಕಿಂಗ್… ಹಿಂಗೆ ಬೆಂಗಳೂರು ಕ್ರಿಕೆಟ್ ತಂಡ ಆರ್ಸಿಬಿ ಹೀರೋ & ಭಾರತೀಯ ಕ್ರಿಕೆಟ್ ದೊರೆ ಕಿಂಗ್ ಕೊಹ್ಲಿ ಬಗ್ಗೆ ಸಿಕ್ಕಾಪಟ್ಟೆ ಹೊಗಳುತ್ತಾರೆ ಅವರ ಅಭಿಮಾನಿಗಳು. ಯಾಕಂದ್ರೆ ನಮ್ಮ ಕಿಂಗ್ ಕೊಹ್ಲಿ ಹವಾನೇ ಅದೇ ರೀತಿ ಇದೆ. ಟಿ20 ಕ್ರಿಕೆಟ್ ನಲ್ಲಿ ಕಿಂಗ್ ಕೊಹ್ಲಿ ಆರ್ಭಟಿಸಿದ್ದು, ಕ್ರಿಸ್ ಗೇಲ್ ವಿಶ್ವ ದಾಖಲೆ ಶೇಕ್, ಶೇಕ್ ಮಾಡುತ್ತಿದೆ. ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ಅದು ಕೂಡ 13500 ರನ್ ಕಲೆಹಾಕುವ ಮೂಲಕ. ಅಂದರೆ ಟಿ20 ಕ್ರಿಕೆಟ್ನಲ್ಲಿ ಹದಿಮೂರು ಸಾವಿರದ ಐನೂರು ರನ್ ಕಲೆಹಾಕಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಚಿನ್ನದ ಗಣಿಯಲ್ಲಿ ಓರ್ವ ಕಾರ್ಮಿಕ ಬಲಿ, ಮತ್ತೋರ್ವನಿಗೆ ಮಾರಣಾಂತಿಕ ಗಾಯ!
ದಾಖಲೆಯೊಂದಿಗೆ ವಿರಾಟ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಒಂದು ವೇಳೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಶತಕ ಮೂಡಿಬಂದರೆ, ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಬಹುದು. ಏಕೆಂದರೆ ಕೊಹ್ಲಿಗಿಂತ ಮುಂದಿರುವ ಕೀರನ್ ಪೊಲಾರ್ಡ್ (13537) ಹಾಗೂ ಶೊಯೆಬ್ ಮಲಿಕ್ 13571 ರನ್ ಕಲೆಹಾಕಿದ್ದಾರೆ.
ಹೀಗಾಗಿ ಜೂನ್ 3 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ನಿಂದ ಮೂರಂಕಿ ರನ್ ಮೂಡಿಬಂದರೆ ಭರ್ಜರಿ ದಾಖಲೆ ನಿರ್ಮಾಣವಾಗಲಿದೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆಯಲು ಕೊಹ್ಲಿಗೆ ಬೇಕಿರುವುದು ಕೇವಲ 1063 ರನ್ಗಳು ಮಾತ್ರ.
ಸದ್ಯ ಈ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ 463 ಟಿ20 ಪಂದ್ಯಗಳಲ್ಲಿ 455 ಇನಿಂಗ್ಸ್ ಆಡಿದ್ದು, ಈ ವೇಳೆ 22 ಶತಕ ಹಾಗೂ 88 ಅರ್ಧಶತಕಗಳೊಂದಿಗೆ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.