ಕೊಡಗು : ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ಮುಂಭಾಗದ ಬಸ್ ನಿಲ್ದಾಣಕ್ಕೆ ಕಳೆದ ಹಲವು ತಿಂಗಳಿಂದ ಕೆಎಸ್ಆರ್ಟಿಸಿ ಬಸ್ ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಶಾಲಾ ಮಕ್ಕಳು ಗ್ರಾಮಸ್ಥರು ಜನಪ್ರತಿನಿಧಿಗಳು ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ರು.
ಇದೇ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಹಾರಂಗಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ಬಸ್ ಸಂಚಾರಕ್ಕೆ ಕೇವಲ 300 ಮೀಟರ್ ದೂರದಲ್ಲಿ ಬದಲಿ ರಸ್ತೆ ಇದ್ದರು ಕೂಡ ಬಸ್ ಚಾಲಕರು ಹೋಗುವುದಿಲ್ಲ. ಇದರಿಂದಾಗಿ ಡ್ಯಾಮ್ ಮುಂಭಾಗದ ಬಸ್ ನಿಲ್ದಾಣಕ್ಕೆ ಒಂದರಿಂದ ಎರಡು ಕಿಲೋಮೀಟರ್ ದೂರದಿಂದ ನಡೆದುಕೊಂಡು ಬರುವ ಯಡವನಾಡು ಮತ್ತು ಹುದುಗೂರು ಗ್ರಾಮದ ಶಾಲಾ ಮಕ್ಕಳು ಕೂಲಿ ಕಾರ್ಮಿಕರು ಬಸ್ಸಿಗಾಗಿ ಮತ್ತೆ 1 ಕಿಲೋಮೀಟರ್ ನಷ್ಟು ನಡಿಯುವಂತಾಗಿದೆ.
ಈ ಬಗ್ಗೆ ಈಗಾಗಲೇ ಕುಶಾಲನಗರದ ಕೆಎಸ್ಆರ್ಟಿಸಿ ವ್ಯವಸ್ಥಾಪಕರಿಗೂ ಡಿಪೋ ಮ್ಯಾನೇಜರ್ಗೂ ಹಲವು ಬಾರಿ ದೂರು ನೀಡಿದರು, ಯಾವುದೇ ಪ್ರಯೋಜನ ಆಗದೆ ಹಿನ್ನೆಲೆ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಯಕರು ಬಸ್ ಅಡ್ಡ ಗಟ್ಟಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಇದೇ ರೀತಿ ಮುಂದುವರೆದಲ್ಲಿ ರಸ್ತೆ ತಡೆದು ಉಗ್ರ ರೀತಿಯಲ್ಲಿ ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.