ಹಾಸನ: ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ ಇರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆ ಚೆನ್ನಾಗಿ ಆಗಲಿದೆ. ಇದರಿಂದ ಮತ್ತೆ ಜಲಸ್ಪೋಟ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ಇನ್ನು ಸಾಗರದಲ್ಲಿ ಒಂದು ಜಲಸ್ಪೋಟ ಎಂದು ಹೇಳಿದ್ದೆ ಅದು ಆಗಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀಗಳು, ಅವರಿಗೆ ಏನೂ ತೊಂದರೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ಒಳಗೆ ಮೇಘಸ್ಪೋಟ ಆಗೋ ಸಾಧ್ಯತೆ ಇದೆ. ಜನವರಿ ಒಳಗೆ ಒಂದು ದೊಡ್ಡ ಗಂಡಾಂತರ ಇದೆ.
ಅಕಾಲದಲ್ಲಿ ಮಳೆ ಬಂದರೆ ಸಕಾಲದಲ್ಲಿ ತೊಂದರೆ ಆಗಲಿದೆ ಎಂದು ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ. ದೇಶದಲ್ಲಿ ಮೇಘ ಸ್ಪೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿದಿತ್ತು. ಇದು ರಾಜ್ಯಕ್ಕೂ ಇದೆ ದೇಶಕ್ಕೂ ಇದೆ ಎಂದು ಹೇಳಿದ್ದಾರೆ. ಅಲ್ಲದೇ ದ್ವೇಷ ಅಸೂಯೆ ಈ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.