ಭಾರತೀಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ಹೇಳಿದ ನಂತರ, ವಿರಾಟ್ ನಿವೃತ್ತಿ ತಮ್ಮ ನಿರ್ಧಾರವನ್ನು ಅನೌನ್ಸ್ ಮಾಡಿದ್ದು, ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳೂ ಭಾವುಕರಾಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯೇ ನೀಡಿದ್ದಾರೆ.
ಸೋಶೀಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟಿಗ ನಿಮ್ಮಂತೆ ಒಂದು ಮಾದರಿಯ ಕ್ರೀಡೆಯಿಂದ ನಿವೃತ್ತಿಯಾದ ಕೂಡಲೇ, ಜನರು ಆ ಸಂದರ್ಭದಲ್ಲಿ ಆತನ ಸಾಧನೆಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಆತ ನಿರ್ಮಿಸಿದ ದಾಖಲೆಗಳು, ಆತನ ವೃತ್ತಿಜೀವನದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುತ್ತಾರೆ.
View this post on Instagram
ಆದರೆ, ನೀವು (ಕೊಹ್ಲಿ) ಅಂಥ ಸಾಧನೆಗಳನ್ನು ಮಾಡುವುದರ ಹಿಂದೆ ಎಷ್ಟು ಪರಿಶ್ರಮ ಪಟ್ಟಿದ್ದೀರಿ ಎಂಬುದು ನನಗೆ ಮಾತ್ರ ಗೊತ್ತು. ನೀವು ಯಾರಿಗೂ ಕಾಣಿಸದಂತೆ ಅತ್ತ ಕಣ್ಣೀರನ್ನು ನಾನು ನೋಡಿದ್ದೇನೆ. ಯಾರಿಗೂ ಕಾಣದ ಒಂದು ಅಂತರ್ಯುದ್ಧವನ್ನು ನೀವು ಮಾಡಿದ್ದೀರಿ. ಅದನ್ನು ನಾನು ಗಮನಿಸಿದ್ದೇನೆ. ನನಗೆ ಗೊತ್ತು…. ಈ ಕ್ರೀಡೆಗಾಗಿ ನೀವೆಷ್ಟು ಸಮರ್ಪಿಸಿಕೊಂಡಿದ್ದಿರಿ ಅಂತ, ನಿಮ್ಮಲ್ಲಿನ ಸಮರ್ಪಣಾಭಾವದಿಂದ ನೀವೆಷ್ಟು ತ್ಯಾಗಗಳನ್ನು ಮಾಡಿದ್ದೀರಿ ಅಂತ” ಎಂದು ಅನುಷ್ಕಾ ಮೆಲುಕು ಹಾಕಿದ್ದಾರೆ.
ಪ್ರತಿಯೊಂದು ಟೆಸ್ಟ್ ಸರಣಿ ಮುಗಿಸಿ ಬಂದ ಮೇಲೂ ನೀವು ಮತ್ತಷ್ಟು ಪ್ರಬುದ್ಧರಾಗಿರುತ್ತಿದ್ದಿರಿ, ಮತ್ತಷ್ಟು ಕ್ರಿಕೆಟ್ ಹಸಿವಿಗೆ ಒಳಗಾಗಿರುತ್ತಿದ್ದಿರಿ. ಇಂಥ ಒಬ್ಬ ಸಾಧಕನ ಜೊತೆಗೆ ನಾನು ನನ್ನ ಜೀವನ ಕಳೆಯಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿ ನಾನು ಗಳಿಸಿದ ಅತಿ ದೊಡ್ಡ ಸವಲತ್ತು ಎಂದೇ ಭಾವಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.
“ನಾನು, ಈ ಹಿಂದೆ, ನೀವು (ಕೊಹ್ಲಿ) ಹಲವಾರು ಬಾರಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುತ್ತೀರಿ ಎಂದು ಅಂದುಕೊಂಡಿದ್ದೆ. ಆದರೆ, ನೀವು ನಿಮ್ಮ ಹೃದಯದ ಮಾತನ್ನು ಆಲಿಸಿದಿರಿ. ಹಾಗಾಗಿ, ನಾನು ಈ ಸಂದರ್ಭದಲ್ಲಿ ಹೇಳುವುದಿಷ್ಟೇ. ನಿಮ್ಮೀ ವಿದಾಯದ ಪ್ರತಿ ಹಿರಿಮೆ ಅಕ್ಷರಶಃ ನಿಮಗೇ ಸಲ್ಲಬೇಕು’’ ಎಂದು ಹೇಳಿದ್ದಾರೆ.