ಬಂಗಾರಪೇಟೆ: ಹುಡುಗಿ ಕಾಣಿಯಾಗಿರುವ ಕೇಸುವೊಂದರ ವಿಚಾರಣೆ ವೇಳೆ ವ್ಯಕ್ತಿಯೊಬ್ಬರಿಂದ ತೆಗೆದುಕೊಂಡಿದ್ದ ಪಿಎಸ್ ಐ ಅವರಿಂದ ಮೊಬೈಲ್ ವಾಪಾಸ್ ಪಡೆಯಲು 10 ಸಾವಿರ ಲಂಚ ಪಡೆಯುತ್ತಿರುವ ವೇಳೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪಿಎಸ್ ಐ ಸುನೀಲ್ ಐರೋಡಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಐರೋಡಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ.
ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಮಚಂದ್ರಪ್ಪ ಎಂಬುವವರ ಮಧ್ಯಸ್ಥಿಕೆಯಲ್ಲಿ 10 ಸಾವಿರ ರೂಗಳ ನಗದನ್ನು ನೀಡುವ ವೇಳೆ ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಬೂದಿಕೋಟೆ ಪಿಎಸ್‌ಐ ಸುನಿಲ್ ಕುಮಾರರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.