ಕೋಲಾರ – ನಾನು ಸೈನಿಕರ ಬಗ್ಗೆ ಅಪಮಾನ ರೀತಿಯಲ್ಲಿ ಮಾತನಾಡಿಲ್ಲ, ಯಾರನ್ನು ದೂಷಣೆ ಮಾಡುವ ರೀತಿ ಮಾತನಾಡಿಲ್ಲ. ದೇಶದ ಒಳಗೆ ಬಂದು 26 ಜನ ಜನ ಅಮಾಯಕರನ್ನು ಕೊಂದರು, ಅವರನ್ನು ಫಸ್ಟ್ ಹುಡುಕಿ ಆ ಹೆಣ್ಣುಕ್ಕಳಿಗೆ ಒಪ್ಪಿಸಿ ಎಂದು ಹೇಳಿರುವೆ ಅಷ್ಟೇ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವ್ರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಪಹಲ್ಗಾಮ್ ನಲ್ಲಿ ನಡೆದ ಘಟನೆಯಿಂದ ಹೆಣ್ಣು ಮಕ್ಕಳು ಎಷ್ಟು ತೊಂದರೆ ನೋವು ಅನುಭವಿಸುತ್ತಿದ್ದಾರೆ,
Hubballi: ಪತ್ರಕರ್ತರು ವೃತ್ತಿ ನಿಷ್ಠೆ ಬೆಳೆಸಿಕೊಳ್ಳಿ: ರಾಜು ಅನಂತ ಸಾ ನಾಯಕವಾಡಿ ಸಲಹೆ!
ದೇಶದಲ್ಲಿ ಮೂರು, ಆರು ತಿಂಗಳೊಮ್ಮೆ ಇಂತಹ ಕೃತ್ಯಗಳು ನಡೆಯುತ್ತಿದೆ, ಇದಕ್ಕೆ ಕೊನೆ ಇಲ್ಲವಾ? ಭಾರತೀಯರು ಬಲಿಯಾಗುತ್ತಿರುಬೇಕಾ? ನಾನು ಯಾವುದೇ ಪಕ್ಷದಿಂದ ಮಾತನಾಡುತ್ತಿಲ್ಲ, ಕಾಂಗ್ರೆಸ್ ಶಾಸಕನಾಗಿದ್ದರೂ ಒಬ್ಬ ದೇಶದ ಪ್ರಜೆಯಾಗಿ ಮಾತನಾಡುತ್ತಿದ್ದೇನೆ, ಪಬ್ಲಿಕ್ ಮಾತನಾಡುತ್ರಿರುವ ಬಗ್ಗೆ ಮಾತನಾಡಿರುವೆ, ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ತೃಪ್ತಿಕರವಾಗಿಲ್ಲ, ಭಾರತ ಇನ್ನಷ್ಟು ಪ್ರತಿಕಾರ ತೀರಿಸಿಕೊಳ್ಳಬೇಕಾಗಿತ್ತು,
ಭಾರತಕ್ಕೆ ಒಳ್ಳೆ ಅವಕಾಶವಿತ್ತು ಎಂದು ಹೇಳಿದರು.