ಕೋಲಾರ – ಸತ್ಯಶೋಧನೆಯ ಜವಾಬ್ದಾರಿ ಹೊತ್ತ ಪತ್ರಕರ್ತರು ಸುದ್ದಿ ಮಾಡುವಾಗ ಅದರಲ್ಲಿ ವಾಸ್ತವಾಂಶವಿರಬೇಕೇ ಹೊರತೂ ತಮ್ಮ ಅಭಿಪ್ರಾಯಗಳಿಗೆ ಅವಕಾಶ ಇರಬಾರದು, ವೃತ್ತಿಧರ್ಮಕ್ಕೆ ಕುತ್ತು ಬಾರದಂತೆ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಎಚ್ಚರವಹಿಸಬೇಕು,ಬರಹದಲ್ಲಿ ಸಮಾಜದ ಹಿತವಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡುತ್ತಿದ್ದರು.
ಹೈದರಾಬಾದ್ನಲ್ಲಿ ಮೊದಲ ರೆಸ್ಟೋರೆಂಟ್ ತೆರೆದ ಸಿರಾಜ್: ಕೊಹ್ಲಿ ಹಾದಿ ಅನುಸರಿಸಿದ ಆಟೋ ಡ್ರೈವರ್ ಮಗ!
ಸುದ್ದಿ ಮಾಡುವಾಗ ಭಾಷೆ ಮೇಲೆ ಹಿಡಿತ ಇರಬೇಕು, ಪ್ರೌಢಿಮೆಯೂ ಅಗತ್ಯ ಎಂದ ಅವರು, ಪ್ರತಿಪತ್ರಿಕೆಗೂ ತನ್ನದೇ ಆದ ವಿನ್ಯಾಸ, ಬರಹದ ಶೈಲಿ ಇರುತ್ತದೆ ಎಂದ ಅವರು ತಾವು 1992ರಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದನ್ನು ನೆನಪಿಸಿಕೊಂಡು ನನ್ನ ಜೀವನದ ಯೌವನವನ್ನು ಪತ್ರಕರ್ತನಾಗಿ ಬಳಸಿಕೊಂಡೆ, ನನಗೆ ಮಾತೃಬೇರು ಪತ್ರಿಕೋದ್ಯಮ ಎಂದು ತಿಳಿಸಿದರು. ಬರಹ ಗೊತ್ತಿದ್ದರೆ ಮಾತ್ರ ಪತ್ರಕರ್ತರಾಗಲು ಸಾಧ್ಯವಿಲ್ಲ, ಆಧುನಿಕತೆಯ ಉತ್ಪನ್ನಗಳನ್ನು ಸಹಿಸಿಕೊಳ್ಳಬೇಕು, ಅದು ನಮ್ಮನ್ನು ದಾರಿತಪ್ಪಿಸುವ ಕೆಲಸವಾಗದಂತೆ ಎಚ್ಚರವಹಿಸಬೇಕು, ಪತ್ರಿಕೋದ್ಯಮವನ್ನು ಪ್ರೀತಿಯಿಂದ ಅಪ್ಪಿಕೊಂಡಾಗ ತಾನಾಗಿಯೇ ನಿಷ್ಠೂರತೆ ಬದ್ದತೆ ಬರುತ್ತದೆ ವೃತ್ತಿಯ ರಕ್ಷಣೆಗೆ ವೃತ್ತಿಪರತೆ ಅಗತ್ಯವಿದೆ, ಆಗ ಗೌರವವೂ ಸಿಗುತ್ತದೆ ಎಂದರು.