ಕೋಲಾರ – ಇಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೆಶಕರ ಚುನಾವಣೆ. ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ನಡೆಯುತ್ತಿರುವ ಚುನಾವಣೆ. ಡಿಸಿಸಿ ಬ್ಯಾಂಕ್ ನ 18 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು
ಈಗಾಗಲೇ 6 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಮೂರು ಜನ ಶಾಸಕರು ಸೇರಿ ಆರು ಜನ ಅವಿರೋಧ ಆಯ್ಕೆಯಾಗಿದ್ದಾರೆ.
ʼಡೆವಿಲ್ʼ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರ್ತಾರಾ ದರ್ಶನ್..ದಾಸ ಫಾರಿನ್ ಟ್ರಿಪ್‌ಗೆ ಕೋರ್ಟ್‌ನಿಂದ ಸಿಗುತ್ತಾ ಅನುಮತಿ?
ಕೆಜಿಎಫ್ ಶಾಸಕಿ ರೂಪಕಲಾ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು ಬಾಕಿ ಇರುವ 12 ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ ನ ಎರಡು ಬಣ ಹಾಗೂ ಮೈತ್ರಿ ಪಕ್ಷಗಳ ನಡುವೆ ಜಿದ್ದಾ ಜಿದ್ದಿನ ಕಣವಾಗಿರುವ ಚುನಾವಣೆಯಾಗಿದೆ.
ಮತದಾನ ನಂತರ ಇಂದೇ ಫಲಿತಾಂಶ ಪ್ರಕಟವಾಗುತ್ತದೆ.
ಚುನಾವಣೆ ಹಿನ್ನೆಲೆ ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.