ಮುಳಬಾಗಿಲು – ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿ ಅವರಿಂದ 11 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಂದ್ರಪ್ರದೇಶದಿಂದ ಬೆಂಗಳೂರು ಕಡೆಗೆ ಕೋಲಾರದ ಮುಖಾಂತರ ಗಾಂಜಾ ಮಾರಾಟ ಕುರಿತು ಖಚಿತ ಮಾಹಿತಿ ಮೇರೆಗೆ ಮುಳಬಾಗಿಲು ಗ್ರಾಮಾಂತರ ಪೊಲಿಸ್ ಪಿಐ ಅರಣ್ಪಾಟೀಲ್ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ,
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಚಿಯಾಂಡಹಳ್ಳಿ ಅರುಣ್ ಕುಮಾರ್ (29), ಮುಳಬಾಗಿಲು ತಾಲ್ಲೂಕು ಸಂಜಯ್ (23), ಕೆಆರ್ ಪುರಂ ಗೋಕುಲ್ (29) ಎಂಬ ಆರೋಪಿಗಳು ಗಾಂಜಾ ಮಾಧಕ ವಸ್ತುವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ 10 ಲಕ್ಷ ರೂ ಮೌಲ್ಯದ 11 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.