ಬಾಗಲಕೋಟೆ : ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಏ.೩೦ ರಂದು ನಡೆಯಲ್ಲಿರುವ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅವರಿಂದ ಕೊಡಮಾಡುವ ಬಸವಶ್ರೀ ಪ್ರಶಸ್ತಿಗೆ, ರಬಕವಿ ಭಾರತ್ ಗ್ಯಾಸ್ ಸಂಸ್ಥೆಯ ವರ್ತಕರಾದ ಸೋಮಶೇಖರ್ ಕೊಟ್ರಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಕಾರಣಕ್ಕೆ ರಬಕವಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಸೇರಿ, ಕೊಟ್ರಶೆಟ್ಟಿ ಅವರನ್ನು ಬೇಟಿಮಾಡಿ ಸನ್ಮಾನಿಸಿ ಅಭಿನಂದಿಸುವಲ್ಲಿ ಗೌರವಿಸಿದರು. ಸೋಮಶೇಖರ ಕೊಟ್ರಶಟ್ಟಿ ಅವರು ತಮ್ಮ ಸಂಸ್ಥೆಯಿಂದ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದವರು. ಜೋತೆಗೆ ಸರ್ವಹಿತ ಚಿಂತನೆಗಳಲ್ಲಿ ಭಾಗಿಯಾಗಿ, ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕೈಜೋಡಿಸಿ ಸರ್ವ ಸಮುದಾಗಳಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆ ಅಪಾರವಾಗಿದೆ. ಬಾಗಲಕೋಟೆ ಜಿಲ್ಲಾಡಳಿತವು ಬಸವಶ್ರೀ ಪ್ರಶಂಸ್ತಿಗೆ ಇವರನ್ನು ಆಯ್ಕೆ ಮಾಡಿರುವುದು ಅವಳಿ ನಗರಕ್ಕೆ ಸಂತಸ ತಂದಿದೆ ಎಂದು ವಕೀಲರಾದ ಜಿ.ಎಮ್.ಅಮ್ಮಣಗಿಮಠ ಹೇಳಿದರು.
ಶ್ರೀ ಅಲ್ಲಮಪ್ರಭು ದೇವಸ್ಥಾನದ ಸೇವಾ ಸಮಿತಿ ಸಮುದಾಯ ಭವನಕ್ಕೆ 1.ಲಕ್ಷ ರೂಪಾಯಿ ಅನುದಾನ
ಇದೇ ಸಂದರ್ಭದಲ್ಲಿ ಶಿವಾನಂದ ಮಠದ, ಮ್ರುತ್ಯುಂಜಯ ಹುಲಗೇರಿಮಠ, ದಯಾನಂದ ಬಾಗಲಕೋಟಮಠ, ಸಂಜಯ ಅಮ್ಮಣಗಿಮಠ, ಮಾದೇವಯ್ಯ ಮಠಪತಿ, ಚಿಕ್ಕಯ್ಯ ಮಠದ, ಮಹಾದೇವಯ್ಯ ನಂದೈಗೊಳ, ಗಂಗಯ್ಯ ಹಿರೇಮಠ, ಸೇರಿದಂತೆ ಅನೇಕರು ಇದ್ದರು.